ಬಂಡಾರು ದತ್ತಾತ್ರೇಯ ಪುತ್ರ ಹೃದಯಾಘಾತದಿಂದ ವಿಧಿವಶ

Bandaru Dattatreya's Son Dies Of Heart Attack
Highlights

ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಅವರ ಪುತ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ದತ್ತಾತ್ರೇಯ ಅವರ ಮಗ 21 ವರ್ಷದ ಬಂಡಾರು ವೈಷ್ಣವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೆಡಿಕಲ್ ವಿದ್ಯಾರ್ಥಿಯಾಗಿರುವ ವೈಷ್ಣವ್ ನಿನ್ನೆ ರಾತ್ರಿ ತಮ್ಮ ಕುಟುಂಬ ಸದಸ್ಯರ ಜೊತೆ ಊಟಕ್ಕೆ ತೆರಳಿದ್ದರು.

ಹೈದರಾಬಾದ್ (ಮೇ. 23): ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಅವರ ಪುತ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ದತ್ತಾತ್ರೇಯ ಅವರ ಮಗ 21 ವರ್ಷದ ಬಂಡಾರು ವೈಷ್ಣವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೆಡಿಕಲ್ ವಿದ್ಯಾರ್ಥಿಯಾಗಿರುವ ವೈಷ್ಣವ್ ನಿನ್ನೆ ರಾತ್ರಿ ತಮ್ಮ ಕುಟುಂಬ ಸದಸ್ಯರ ಜೊತೆ ಊಟಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ  ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಸ್ವತಃ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಂಡಾರು ದತ್ತಾತ್ರೇಯ ಅವರಿಗೆ ಪುತ್ರನ ಸಾವಿನ ಸಂದೇಶವನ್ನು ತಡವಾಗಿ ತಿಳಿಸಲಾಯಿತು. ಇನ್ನು ಪುತ್ರಶೋಕದಲ್ಲಿ ಇರುವ ದತ್ತಾತ್ರೇಯ ಅವರಿಗೆ ಬಿಜೆಪಿ ನಾಯಕರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

loader