Asianet Suvarna News Asianet Suvarna News

ಎಲೆ​ಯ​ಡಿಕೆ, ಗುಟ್ಕಾಗೆ ಪುರಿ ದೇಗುದಲ್ಲಿ ನಿಷೇಧ: ಉಲ್ಲಂಘಿಸಿದ್ರೆ ದಂಡ

ಬಾಯಿ ಸ್ವಚ್ಛ​ವಾ​ಗಿ​ಟ್ಟು​ಕೊಂಡೇ ದೇವ​ಸ್ಥಾನ ಪ್ರವೇ​ಶಿ​ಸ​ಬೇಕು| ಎಲೆ​ಯ​ಡಿಕೆ, ಗುಟ್ಕಾಗೆ ಪುರಿ ದೇಗುದಲ್ಲಿ ನಿಷೇಧ: ಉಲ್ಲಂಘಿಸಿದ್ರೆ 500 ದಂಡ| 

Ban on paan and gutka in Puri Jagannath temple from August 1
Author
Bangalore, First Published Jul 31, 2019, 8:31 AM IST

ಭುವ​ನೇ​ಶ್ವ​ರ[ಜು.31]: ತಾಂಬೂಲ ಅಥವಾ ಎಲೆ-ಅಡಿ​ಕೆ ಮೆಲ್ಲು​ವುದು ಭಾರ​ತ​ದಲ್ಲಿ ಸಾಮಾನ್ಯ ಚಟ. ಇದರ ಜತೆಗೆ ಗುಟ್ಕಾ ಮತ್ತು ತಂಬಾಕು ಕೂಡ ಸೇರಿ​ಕೊಂಡಿದ್ದು, ಈ ಚಟ ಉಳ್ಳ​ವರು ಎಲ್ಲೆಂದ​ರಲ್ಲಿ ಉಗುಳಿ ಅಂದ​ಗೆ​ಡಿ​ಸು​ವುದು ಸಾಮಾನ್ಯ ಎನ್ನುವಂತಾಗಿದೆ. ಇದು ಜಗತ್‌ ಪ್ರಸಿದ್ಧ ಜಗ​ನ್ನಾಥ ದೇವ​ಸ್ಥಾ​ನ​ದ ಅಂದಕ್ಕೂ ಸಂಚ​ಕಾರ ತಂದಿದೆ.

ಅದ​ಕ್ಕಾಗಿ ದೇವ​ಸ್ಥಾನ ಆಡ​ಳಿತ ಮಂಡಳಿ ಇದೀಗ ಕ್ರಮಕ್ಕೆ ಮುಂದಾ​ಗಿದ್ದು, ಬಾಯಿ ಸ್ವಚ್ಛ​ವಾ​ಗಿ​ಟ್ಟು​ಕೊಂಡೇ ದೇವ​ಸ್ಥಾನ ಪ್ರವೇ​ಶಿ​ಸ​ಬೇಕು. ದೇವ​ಸ್ಥಾ​ನದ ಆವ​ರ​ಣ​ದ​ಕಲ್ಲಿ ಎಲೆ-ಅಡಿಕೆ, ಗುಟ್ಕಾ ಮತ್ತು ತಂಬಾಕು ಉಗು​ಳಿದ್ದ ಕಂಡು ಬಂದರೆ 500 ರೂ ದಂಡ ಫಿಕ್ಸ್‌.

ಈಗಾ​ಗಲೇ ದೇವ​ಸ್ಥಾ​ನದ ಎಲ್ಲೆಡೆ ಸಿಸಿ ಕ್ಯಾಮೆರಾ ಅಳ​ವ​ಡಿ​ಸಿದ್ದು, ಆ.1ರಿಂದಲೇ ಎಲೆ-ಅಡಿಕೆ, ಗುಟ್ಕಾ ಮತ್ತು ತಂಬಾಕು ಹಾಕಿ​ಕೊಂಡು ದೇವ​ಸ್ಥಾ​ನದ ಆವ​ರಣ ಪ್ರವೇ​ಶಕ್ಕೆ ನಿಷೇಧ ಹೇರಿ​ದೆ.

Follow Us:
Download App:
  • android
  • ios