ಈ ಬಗ್ಗೆ ಮಾತನಾಡಿದ ಅರಣ್ಯ ಮಂತ್ರಿ ಹರ್ಷವರ್ಧನ್ ಸಿಂಗ್, ಬುಡಕಟ್ಟು ನಿವಾಸಿಗಳಿಗೆ, ಅರಣ್ಯವಾಸಿಗಳಿಗೆ ಹಾಗೂ ರೈತರಿಗೆ ಈ ತಿದ್ದುಪಡಿ ಸಹಕಾರಿಯಾಗಿದ್ದು, ಅವರ ಆದಾಯದ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದಿದ್ದಾರೆ.

ನವದೆಹಲಿ(ಡಿ.27): ಬುಡಕಟ್ಟು ಜನರ ಹಿತ ಕಾಯುವ ಉದ್ದೇಶದಿಂದ ಭಾರತೀಯ ಅರಣ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಿದಿರಿಗೆ ಮರು ವ್ಯಾಖ್ಯಾನ ನೀಡಲಾಗಿದ್ದು, ಇದಕ್ಕೆ ಲೋಕಸಭೆಯಲ್ಲಿ ಇಂದು ಅನುಮೋದನೆ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಅರಣ್ಯ ತಿದ್ದುಪಡಿ ಕಾಯ್ದೆಯನ್ನು ಡಿಸೆಂಬರ್ 20 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇಂದು ರಾಜ್ಯಸಭೆಯಲ್ಲಿ ದ್ವನಿಮತದ ಮೂಲಕ ಕಾಯ್ದೆಗೆ ಅನುಮೋದಿಸಲಾಗಿದೆ.

ಕಾಯ್ದೆಯನ್ನು ಸರಿಯಾಗಿ ಚರ್ಚಿಸದೇ ಮಂಡಿಸಲಾಗಿದೆ ಎಂದು ವಿರೋದ ಪಕ್ಷಗಳಾದ ಕಾಂಗ್ರೆಸ್, ಬಿಜು ಜನತಾದಳ ಮತ್ತು ಸಮಾಜವಾದಿ ಪಕ್ಷಗಳು ಪ್ರತಿಭಟನೆ ನಡೆಸಿ ಸದನದಿಂದ ಹೊರ ನಡೆದವು. ಆ ಬಳಿಕ ಅರಣ್ಯ ತಿದ್ದುಪಡಿ ಕಾಯ್ದೆಯನ್ನು ದ್ವನಿಮತದೊಂದಿಗೆ ಅಂಗೀಕಾರ ಮಾಡಲಾಯಿತು.

ಈ ಬಗ್ಗೆ ಮಾತನಾಡಿದ ಅರಣ್ಯ ಮಂತ್ರಿ ಹರ್ಷವರ್ಧನ್ ಸಿಂಗ್, ಬುಡಕಟ್ಟು ನಿವಾಸಿಗಳಿಗೆ, ಅರಣ್ಯವಾಸಿಗಳಿಗೆ ಹಾಗೂ ರೈತರಿಗೆ ಈ ತಿದ್ದುಪಡಿ ಸಹಕಾರಿಯಾಗಿದ್ದು, ಅವರ ಆದಾಯದ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದಿದ್ದಾರೆ.