ವೈಜ್ಞಾನಿಕ ಕೃಷಿ ಪದ್ಧತಿ ಮಾಹಿತಿ ಇಲ್ಲದೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಲೆದಾಡುತ್ತಾರೆ. ಆದ್ರೆ ರೈತರ ಇಂಥ ಅಲೆದಾಟ ತಪ್ಪಿಸಲು ಬಳ್ಳಾರಿ ಕೃಷಿ ಇಲಾಖೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.
ಬಳ್ಳಾರಿ(ಅ.24): ವೈಜ್ಞಾನಿಕ ಕೃಷಿ ಪದ್ಧತಿ ಮಾಹಿತಿ ಇಲ್ಲದೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಲೆದಾಡುತ್ತಾರೆ. ಆದ್ರೆ ರೈತರ ಇಂಥ ಅಲೆದಾಟ ತಪ್ಪಿಸಲು ಬಳ್ಳಾರಿ ಕೃಷಿ ಇಲಾಖೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.
ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ರೈತರ ವಾಟ್ಸಾಪ್ ಗ್ರೂಪ್ ಆರಂಭಿಸಿದ್ದಾರೆ. ವಾಟ್ಸಾಪ್ ಬಳಕೆ ಮಾಡುವ ರೈತರ ಪೋನ್ ನಂಬರ್'ಗಳನ್ನ ಕ್ರೋಢಿಕರಿಸಿ ವಾಟ್ಸಾಪ್ ಗ್ರೂಪ್ ಮಾಡಿದ್ದಾರೆ. ರೈತರು ಕೃಷಿಗೆ ಸಂಬಂಧಿಸಿದಂತೆ ತಮಗೆ ಬೇಕಾದ ಮಾಹಿತಿಗಳನ್ನ ಈ ಗ್ರೂಪ್ ನಲ್ಲಿ ಹಾಕಿದ್ರೆ ಸಾಕು. ಕೃಷಿ ಅಧಿಕಾರಿಗಳು, ಕೃಷಿ ತಜ್ಞರು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಾರೆ.
ಯಾವ ಬೆಳೆ ಹೇಗೆ ಬೆಳಿಯೋದು? ಯಾವ ಬೀಜ ಉತ್ತಮ? ಗೊಬ್ಬರ? ಔಷಧಿ ಹೀಗೆ ಎಲ್ಲಾ ಮಾಹಿತಿಗಳನ್ನೂ ಪ್ರಾತ್ಯಕ್ಷಿಕ ವಿಡಿಯೋ ಜೊತೆ ವಾಟ್ಸಾಪ್ ಮೂಲಕವೇ ರೈತರಿಗೆ ಕಲ್ಪಿಸಲಾಗುತ್ತೆ.
