'ಗೌಡ್ರು ಬಂದು ರಾಜಕೀಯ ಮಾಡಿದ್ರೆ ಅಡ್ರೆಸ್ ಇಲ್ದೆ ಹೋಗ್ತಾರೆ'!
ಬಳ್ಳಾರಿ ಲೋಕಸಭಾ ಕಣ ಇದೀಗ ಶ್ರೀರಾಮಲು ಮತ್ತು ಸಚಿವ ಡಿ.ಕಡ.ಶಿವಕುಮಾರ್ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಸೇನಾನಾಯಕರಾಗಿ ಶ್ರೀರಾಮಲು ಇದ್ದರೆ ಮೈತ್ರಿ ಸರಕಾರದ ಪರವಾಗಿ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಈ ನಡುವೆ ಶ್ರೀರಾಮಲು ಡಿಕೆಶಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.
ಬಳ್ಳಾರಿ(ಅ.16) ಕನಕಪುರದ ಗೌಡ್ರು ಇಲ್ಲಿಗೆ ಬಂದು ನಮ್ಮನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸತ್ಯ ಹರಿಚ್ಚಂದ್ರನ ರೀತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ಶಾಸಕ ಶ್ರೀರಾಮುಲು ವ್ಯಂಗವಾಡಿದ್ದಾರೆ.
ಡಿಕೆಶಿ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಇದು ಬಡವರ ಹಣ ಎಂಬುದು ಎಲ್ಲರಿಗೂ ಗೊತ್ತು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಬಾರದು ಎಂದು ಸಚಿವ ಡಿಕೆಶಿ ವಿರುದ್ಧ ಶಾಸಕ ಶ್ರೀರಾಮುಲು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಮುಲು ಕೋಟೆ ಕೆಡವಲು ಸೈನ್ಯದೊಂದಿಗೆ ಡಿ.ಕೆ ಶಿವಕುಮಾರ್ ಬಳ್ಳಾರಿಗೆ ಎಂಟ್ರಿ..!
'ಅವನಂಗ ನಾನು ಮಾತನಾಡಿಕೊಂಡು ರಾಜಕಾರಣ ಮಾಡಿಲ್ಲ.ನನೇರವಾಗಿ ಮಾತನಾಡಿ ರಾಜಕೀಯ ಮಾಡಿದ್ದೇನೆ. ಭ್ರಷ್ಟಾಚಾರದಲ್ಲಿ ಈ ಸರಕಾರ ನಂಬರ್ 1 ಇದೆ. ನಾವು ಶೋಷಿತ ಸಮಾಜದವರು. ಗೌಡ್ರು ಇಲ್ಲಿ ಬಂದು ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾಳೆಯಿಂದ ಪ್ರಚಾರ ಆರಂಭವಾಗಲಿದೆ. ಹೋಸಪೇಟೆಯಿಂದ ಪ್ರಚಾರ ಆರಂಭಿಸಲಾಗುವು. 8 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತೇವೆ. ಜೆ.ಶಾಂತಾ ಗೆಲ್ಲುವ ವಿಶ್ವಾಸ ಇದೆ. ನಾನು ಸಂಸದನಾಗಿದ್ದಾಗ ಅನುದಾನದ ಬಳಕೆಯಲ್ಲಿ ನಂ 1 ಸ್ಥಾನದಲ್ಲಿದ್ದೇನೆ ಸ್ಥಳೀಯ ಅಡ್ರೆಸ್ ಇರುವ ಜೆ ಶಾಂತಾ ಅವರನ್ನು ಜನ ಗೆಲ್ಲಿಸಲಿದ್ದಾರೆ. ಅಡ್ರೆಸ್ ಇರಲಾರದ ಉಗ್ರಪ್ಪ ಸೋಲುತ್ತಾರೆ ಎಂದು ಹೇಳಿದ್ದಾರೆ.