ನವದೆಹಲಿ[ಜೂ.22]: ಜಮ್ಮು-ಕಾಶ್ಮೀರದ ಗಡಿಯಲ್ಲಿ ಫೆ.14ರಂದು ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರ ಬಲಿಪಡೆದ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್‌ನಲ್ಲಿ ಅಡಗಿದ್ದ ಜೈಷ್‌ ಉಗ್ರರನ್ನು ಸಂಹಾರ ಮಾಡಿದ್ದ ಕಾರ್ಯಾಚರಣೆಗೆ ಭಾರತೀಯ ವಾಯುಪಡೆ, ಆ ಕಾರ್ಯಾಚರಣೆಗೆ ‘ಆಪರೇಷನ್‌ ಬಂದರ್‌’ ಎಂಬ ರಹಸ್ಯ ಸಂಕೇತಾಕ್ಷರ ಇಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಇಂಥದ್ದೊಂದು ಹೆಸರು ಇಟ್ಟಿದ್ದು ಏಕೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿಲ್ಲವಾದರೂ, ಭಾರತೀಯ ಯುದ್ಧ ಸಂಸ್ಕೃತಿಯಲ್ಲಿ ಮಂಗನಿಗೆ ವಿಶೇಷ ಮಹತ್ವವಿದೆ. ರಾಮಾಯಣದಲ್ಲಿ ಕೋತಿಯ ಅವತಾರವಾಗಿದ್ದ ಹನುಮಂತ, ಲಂಕೆಗೆ ನುಗ್ಗಿ ಅಲ್ಲಿನ ಸೇನೆಯನ್ನು ಧ್ವಂಸ ಮಾಡಿ ಬಂದ ಇತಿಹಾಸವಿದೆ.

ಇದೇ ಕಾರಣಕ್ಕಾಗಿಯೇ ರಹಸ್ಯವಾಗಿಯೇ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ನಡೆಸಿದ ಕಾರ್ಯಾಚರಣೆಗೆ ಮಂಗನ ಹೆಸರನ್ನು ಇಟ್ಟಿರಬಹುದು ಎಂದು ಮೂಲಗಳೂ ತಿಳಿಸಿವೆ.