ನವದೆಹಲಿ(ಜೂ.15): ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ ವಾಯುದಾಳಿ ನಡೆಸಿದ ಕುರಿತು, ವಾಯುದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪೈಲೆಟ್’ಗಳು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವಾಯುದಾಳಿ ಮಾಡುವ ನಿರ್ಣಯ ಕೈಗೊಂಡು ಕೇವಲ 90 ಸೆಕೆಂಡ್’ಗಳಲ್ಲಿ ದಾಳಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಈ ಪೈಲೆಟ್’ಗಳು ತಿಳಿಸಿದ್ದಾರೆ.

ದಾಳಿಯನ್ನು ಗುಪ್ತವಾಗಿ ಇಡುವ ಉದ್ದೇಶದಿಂದ ತಮ್ಮ ಕುಟುಂಬ ವರ್ಗಕ್ಕೂ ಯೋಜನೆ ಕುರಿತು ಮಾಹಿತಿ ನೀಡಿರಲಿಲ್ಲ ಎಂದು ಪೈಲೆಟ್’ಗಳು ತಿಳಿಸಿದ್ದಾರೆ.

ಅಲ್ಲದೇ ಮರುದಿನ ಬಾಲಾಕೋಟ್ ವಾಯುದಾಳಿ ಕುರಿತು ಸುದ್ದಿ ಬಿತ್ತರವಾದಾಗ, ತನ್ನ ಪತ್ನಿ ಈ ಕುರಿತು ಪ್ರಶ್ನೆ ಕೇಳಿದಾಗಲೂ ತಾವೂ ಮೌನವಹಿಸಿದ್ದಾಗಿ ಪೈಲೆಟ್’ವೋರ್ವ ತಿಳಿಸಿದ್ದಾರೆ.