ನಟ ಪ್ರಕಾಶ್ ರೈಗೆ ಡಾ. ಶಿವರಾಂ ಕಾರಂತ್ ಪ್ರಶಸ್ತಿ ನೀಡುತ್ತಿರುವುದಕ್ಕೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ. ಸಂಘ ಪರಿವಾರ ಗೌರಿ ಹತ್ಯೆ ಮಾಡಿದೆ ಎಂದು ಪ್ರಕಾಶ್ ರೈ ಹೇಳಿಕೆ ಖಂಡನೀಯವಾಗಿದ್ದು, ಪ್ರಕಾಶ್ ರೈ ಕಾಂಗ್ರೆಸ್ ಏಜಂಟ್'ನಂತೆ ವರ್ತನೆ ಮಾಡಿ, ಅನಗತ್ಯವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.
ಬೆಂಗಳೂರು (ಅ.06): ನಟ ಪ್ರಕಾಶ್ ರೈಗೆ ಡಾ. ಶಿವರಾಂ ಕಾರಂತ್ ಪ್ರಶಸ್ತಿ ನೀಡುತ್ತಿರುವುದಕ್ಕೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ. ಸಂಘ ಪರಿವಾರ ಗೌರಿ ಹತ್ಯೆ ಮಾಡಿದೆ ಎಂದು ಪ್ರಕಾಶ್ ರೈ ಹೇಳಿಕೆ ಖಂಡನೀಯವಾಗಿದ್ದು, ಪ್ರಕಾಶ್ ರೈ ಕಾಂಗ್ರೆಸ್ ಏಜಂಟ್'ನಂತೆ ವರ್ತನೆ ಮಾಡಿ, ಅನಗತ್ಯವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.
ಪ್ರಚಾರದ ಗೀಳಿಗಾಗಿ ಪ್ರಕಾಶ್ ರೈ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ. ಕಮ್ಯೂನಿಷ್ಟ್ ಪಕ್ಷದ ವೇದಿಕೆಗಳಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ್ದು, ಡಾ. ಶಿವರಾಂ ಕಾರಂತರ ಪ್ರಶಸ್ತಿ ಪಡೆಯುವ ಅರ್ಹತೆಯನ್ನ ಪ್ರಕಾಶ್ ರೈ ಹೊಂದಿಲ್ಲ. ಆದ್ದರಿಂದ ಕಾರಂತ ಪ್ರಶಸ್ತಿಯನ್ನು ಯಾವುದೇ ಕಾರಣಕ್ಕೂ ಪ್ರಕಾಶ್ ರೈಗೆ ಕೊಡಬಾರದು ಎಂದು ಬಜರಂಗದಳ ಆಗ್ರಹಿಸಿದೆ.
