ಬೆಂಗಳೂರು(ಸೆ.19): ಲೋಕಾಯುಕ್ತ ಸಂಸ್ಥೆಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಎಲ್ಲಾ 13 ಮಂದಿ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸೈಯದ್ ರಿಯಾಜ್, ಅಶ್ವಿನ್ ರಾವ್, ಶಂಕರೇಗೌಡ, ಶ್ರೀನಿವಾಸ ಗೌಡ ಹಾಗೂ ಪ್ರಕರಣದ ಕಿಂಗ್ ಪಿನ್ ಅಶ್ವಿನ್ ರಾವ್ ಸೇರಿ 13 ಮಂದಿಗೆ ಜಾಮೀನು ನೀಡಿದೆ. ಆರೋಪಿಗಳು 1 ಲಕ್ಷ ರೂ. ಬಾಂಡ್, ಭದ್ರತಾ ಶ್ಯೂರಿಟಿ, ಪಾಸ್ ಪೋರ್ಟ್'ಅನ್ನು ಎಸ್ಐಟಿ ತನಿಖಾಧಿಕಾರಿಗೆ ನೀಡಬೇಕು. ತನಿಖೆಗೆ ಸಹಕರಿಸಬೇಕು ಜೊತೆಗೆ ಸಾಕ್ಷ್ಯವನ್ನು ನಾಶ ಪಡಿಸಬಾರದು ಈ ಎಲ್ಲಾ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ಜಾಮೀನು ಪಡೆದುಕೊಂಡಿರುವ ಆರೋಪಿಗಳು 1.4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಹಿಂದೆಯೂ ಹೈಕೋರ್ಟ್ ಜಾಮೀನಿಗೆ ಅರ್ಜಿ ಹಾಕಿದ್ದರು ಆದರೆ ಆದರೆ ಪ್ರಕರಣ ಗಂಭೀರವಾದದ್ದು ಜಾಮೀನು ನೀಡಬಾರದು ಎಂದು ಎಸ್'ಐಟಿ ಸುಪ್ರೀಂ ಕೋರ್ಟ್'ಗೆ ಮೊರೆ ಹೋಗಿತ್ತು. ಹೀಗಾಗಿ ಜಾಮೀನು ನೀಡಿರಲಿಲ್ಲ. ಇದೀಗ 13 ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
