ಹಲವು ಎಡವಟ್ಟುಗಳಿಂದಲೇ ಸುದ್ದಿಯಾಗಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ.
ಬೆಂಗಳೂರು (ನ.03): ಹಲವು ಎಡವಟ್ಟುಗಳಿಂದಲೇ ಸುದ್ದಿಯಾಗಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ.
ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಭಗ್ನಗೊಂಡ ಸ್ಮರಣಿಗಳನ್ನು ನೀಡಿ, ರಾಷ್ಟ್ರೀಯ ನಾಯಕನನ್ನೇ ಯಾಮಾರಿಸಿದ್ದಾರೆ. ಜತೆಗೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪಗೆ ನೀಡಿದ ಸ್ಮರಣಿಕೆಯಲ್ಲಿ ಎತ್ತಿನಗಾಡಿ ಇರದೇ ಬರೀ ಎತ್ತುಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸ್ಮರಣಿಕೆಗಳು ಮಾಜಿ ಕಾರ್ಪೋರೇಟರೊಬ್ಬರ ಕಾಲ್ತುಳಿತದಿಂದ ಭಗ್ನಗೊಂಡಿದ್ದವು. ಇದನ್ನು ಮರೆಮಾಚಿದ ಆಯೋಜಕರು ಭಗ್ನಗೊಂಡ ಸ್ಮರಣಿಕೆ ನೀಡಿ, ಕೈ ತೊಳೆದುಕೊಂಡಿದ್ದಾರೆ.
