ಬೋರ್‌'ವೆಲ್‌'ನಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಮಗು ಸುಮಾರು 10 ಗಂಟೆಗಳ ಕಾಲ ಸಾವಿನ ಜೊತೆ ಹೋರಾಡಿ ಸಾವನ್ನೇ ಗೆದ್ದು ಬಂದಿರುವ ಅಪರೂಪದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಆಂಧ್ರಪ್ರದೇಶ(ಆ.16): ಬೋರ್‌'ವೆಲ್‌'ನಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಮಗು ಸುಮಾರು 10 ಗಂಟೆಗಳ ಕಾಲ ಸಾವಿನ ಜೊತೆ ಹೋರಾಡಿ ಸಾವನ್ನೇ ಗೆದ್ದು ಬಂದಿರುವ ಅಪರೂಪದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ನಿನ್ನೆ ಸಂಜೆ 4.30ಕ್ಕೆ ವಿನುಕೊಂಡದ ಉಮ್ಮಡಿವರಂ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಎಂಬುವನ ಪತ್ನಿ ಅನುಷಾ ತನ್ನ ಎರಡು ವರ್ಷದ ಮಗು ಚಂದ್ರಶೇಖರ್‌'ನನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಾ 100 ಅಡಿ ಅಧಿಕಕ್ಕೂ ಆಳವಿರುವ ಬೋರ್‌'ವೆಲ್‌'ಗೆ ಬಿದ್ದಿದೆ.

ನಂತರ ತಾಯಿ ಅಳುತ್ತಾ ಸಹಾಯಕ್ಕಾಗಿ ಸ್ಥಳೀಯರನ್ನು ಕರೆದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ NDRF ತಂಡದವರು ಆಕ್ಸಿಜನ್‌ ಪೈಪ್‌'ನ್ನು ಬೋರ್‌ವೆಲ್‌ ಒಳಗೆ ಬಿಟ್ಟು ಕಾರ್ಯಾಚರಣೆ ಕೈಗೊಂಡರು.

ಸುಮಾರು 10 ಗಂಟೆ ಬಳಿಕ ಮಧ್ಯರಾತ್ರಿ 2.40ಕ್ಕೆ ಬೋರ್‌ವೆಲ್‌ನಿಂದ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.