ಕಾಲುವೆಯಲ್ಲಿ ಸಿಲುಕಿದ್ದ ಆನೆ ಮರಿಯನ್ನು  ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.  ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡಿನಿಂದ ಬೇರ್ಪಟ್ಟು ಆನೆ ಮರಿಯೊಂದು ಕಾಲುವೆಗೆ ಬಿದ್ದಿತ್ತು.  

ಬೆಂಗಳೂರು (ಮಾ. 26): ಕಾಲುವೆಯಲ್ಲಿ ಸಿಲುಕಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡಿನಿಂದ ಬೇರ್ಪಟ್ಟು ಆನೆ ಮರಿಯೊಂದು ಕಾಲುವೆಗೆ ಬಿದ್ದಿತ್ತು.

ತಮಿಳುನಾಡಿನ ಹೊಸೂರು ಬಳಿಯ ಕಾಮನ ದೊಡ್ಡಿ ಬಳಿ ಗುಂಪಿನೊಂದಿಗೆ ಬಂದಿದ್ದ ವೇಳೆ ಕಾಲುವೆಗೆ ಬಿದ್ದಿದ್ದ ಆನೆ‌ ಮರಿಯನ್ನು ಹರಸಾಹಸ ಪಟ್ಟು ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ‌ ಇದು ನಾಲ್ಕನೇ ಬಾರಿ ಗುಂಪಿನಿಂದ ಆನೆ ಮರಿಗಳು ತಪ್ಪಿಸಿಕೊಂಡಿವೆ. ಆನೆ ಮರಿಗಳನ್ನು ಮತ್ತೆ ತನ್ನ ಗುಂಪಿನೊಂದಿಗೆ ಸೇರಿಸುವ ಪ್ರಯತ್ನಪಟ್ಟರೂ ಗುಂಪಿನೊಂದಿಗೆ ಸೇರದೆ ಮತ್ತೆ ಆನೆ ಮರಿಗಳು ನಾಡಿನತ್ತ ಬರುತ್ತಿವೆ. ನಾಡಿಗೆ ಬಂದ ಆನೆ ಮರಿಗಳನ್ನ ತಮಿಳುನಾಡಿನ ಡೆಂಕಣಿಕೋಟೆ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿದೆ.