ಮೊಬೈಲ್’ಗೆ ಚಾರ್ಜ್ ಹಾಕಿದ್ದ ವೇಳೆ ಚಾರ್ಜರ್ ವೈರ್ ಕಡಿದ ಪರಿಣಾಮ ವಿದ್ಯುತ್ ಶಾಕ್’ನಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು : ಮೊಬೈಲ್’ಗೆ ಚಾರ್ಜ್ ಹಾಕಿದ್ದ ವೇಳೆ ಚಾರ್ಜರ್ ವೈರ್ ಕಡಿದ ಪರಿಣಾಮ ವಿದ್ಯುತ್ ಶಾಕ್’ನಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಮೂಡಿಗೆರೆ ತಾಲೂಕಿನ ಆಲ್ದೂರಿನಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಶಾಕ್ ತಗುಲಿ ಮಗುವು ಹೊರಳಾಡುವಾಗ ಮನೆಯವರು ಕೂಡಲೆ ಮಗುವನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.

ಬೆಳಗ್ಗಿನಿಂದಲೂ ಮಗುವಿಗೆ ಚಿಕಿತ್ಸೆ ನೀಡಲಾಗಿದ್ದರು, ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.