ಒಂದು ಕಾಲು ಮತ್ತು ಬಾಲ ಇರುವ ವಿಚಿತ್ರ ಮಗುವೊಂದು ಜನಿಸಿದ ಕೆಲ ನಿಮಿಷಗಳಲ್ಲಿಯೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಸಕಲೇಶಪುರ: ಒಂದು ಕಾಲು ಮತ್ತು ಬಾಲ ಇರುವ ವಿಚಿತ್ರ ಮಗುವೊಂದು ಜನಿಸಿದ ಕೆಲ ನಿಮಿಷಗಳಲ್ಲಿಯೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ತಾಲೂಕಿನ ಚಂಗಡಿಹಳ್ಳಿ ಸಮೀಪದ ಗೋನಳ್ಳಿ ಗ್ರಾಮದ ಚಿನ್ನಮ್ಮ ಹಾಗೂ ಮೂರ್ತಿ ದಂಪತಿಗೆ ಇಂತಹ ವಿಚಿತ್ರ ಮಗು ಜನಿಸಿದೆ. ಚಿನ್ನಮ್ಮ ಗಭೀರ್ಣಿಯಾದ ವೇಳೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದ ವೇಳೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ದೃಢಪಡಿಸಿದ್ದರು.
ಏಳು ತಿಂಗಳ ಗರ್ಭಿಣಿಯಾಗಿದ್ದ ಚಿನ್ನಮ್ಮನಿಗೆ ಸೋಮವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದ್ದು ಕೂಡಗಿನ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ ಮಗುವಿಗೆ ಜನ್ಮ ನೀಡಿದ ಕೆಲವು ನಿಮಿಷದ ನಂತರ ಮಗು ಮೃತಪಟ್ಟಿದೆ ಎಂದು ಹೆರಿಗೆ ಮಾಡಿಸಿದ ಶುಶ್ರೂಷಕಿ ಗೀತಾ ತಿಳಿಸಿದ್ದಾರೆ.
