ಮಡಿಕೇರಿಯ ಇಂದಿರಾ ಗಾಂಧಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ವಿಜಯೋತ್ಸವಕ್ಕೆ ಮುಂದಾದಾಗ, ಎಸ್'ಡಿಪಿಐ ಸಂಘಟನೆ ವಿರೋಧ ವ್ಯಕ್ತಪಡಿಸಿವೆ.

ಹಿಂದೂ ಕಾರ್ಯಕರ್ತರು ಬಾಬ್ರಿ ಮಸೀದಿ ಧ್ವಂಸ ಮಾಡಿ ಇಂದಿಗೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಹಿಂದೂಪರ ಸಂಘಟನೆಗಳು ರಾಜ್ಯದ ಹಲವೆಡೆ ಸಂಭ್ರಮಾಚರಣೆ ಮಾಡಿದರೆ, ಎಸ್'ಡಿಪಿಐ ಮುಂತಾದ ಸಂಘಟನೆಗಳು ಕರಾಳ ದಿನ ಆಚರಿಸಿದವು.

ಮಡಿಕೇರಿಯ ಇಂದಿರಾ ಗಾಂಧಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ವಿಜಯೋತ್ಸವಕ್ಕೆ ಮುಂದಾದಾಗ, ಎಸ್'ಡಿಪಿಐ ಸಂಘಟನೆ ವಿರೋಧ ವ್ಯಕ್ತಪಡಿಸಿವೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು. ಹಾಗಾಗಿ ಕೆಲಕಾಲ ಮಡಿಕೇರಿಯಲ್ಲಿ ಉದ್ವಿಘ್ನನದ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ಧಾರವಾಡದ ವಿವೇಕನಂದ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲು ಮುಂದಾದಾಗ ಪೊಲೀಸರು ಹಾಗೂ ಹಿಂದೂಪರ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ 10ಕ್ಕೂ ಹೆಚ್ಚು ವಿಎಚ್'ಪಿ ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.