Asianet Suvarna News Asianet Suvarna News

ಬಿಸ್ಕೆಟ್ ಪೊಟ್ಟಣದಲ್ಲಿಟ್ಟು ನವಜಾತ ಶಿಶುಗಳ ಮಾರಾಟ

ಪೊಲೀಸರು ಖಾಸಗಿ ನರ್ಸಿಂಗ್ ಹೋಂ'ಅನ್ನು ಶೋಧಿಸಿದಾಗ ಔಷಧಿಗಳ ಮಳಿಗೆಗಳ ಕೊಠಡಿಯಲ್ಲಿ ಬಿಸ್ಕೆಟ್ ಪೊಟ್ಟಣಗಳಲ್ಲಿ ನವಜಾತ ಶಿಶುಗಳನ್ನು ಇಡಲಾಗಿತ್ತು.

Babies Smuggled In Biscuit Cartons Were Sold For 3 Years In West Bengal

ಕೋಲ್ಕತ್ತಾ(ನ.24):  ಬಿಸ್ಕೆಟ್ ಪೊಟ್ಟಣದಲ್ಲಿಟ್ಟು ನವಜಾತ ಶಿಶುಗಳ ಮಾರಾಟ ಮಾಡುತ್ತಿದ್ದ ಜಾಲವನ್ನು ಕೋಲ್ಕತ್ತಾ ಪೊಲೀಸರು ಭೇದಿಸಿದ್ದಾರೆ. ರಕ್ಷಿಸಲಾದ ಮೂರು ನವಜಾತ ಶಿಶುಗಳಲ್ಲಿ ಒಂದು ಮಗು ಜನಿಸಿ ಆಗ ತಾನೆ 4 ಗಂಟೆ ಮಾತ್ರ ಸಮಯವಾಗಿತ್ತು.

ಘಟನೆಗೆ ಸಂಬಂಧಪಟ್ಟಂತೆ 8 ಮಂದಿಯನ್ನು ಬಂಧಿಸಿದ್ದು, ಇವರಲ್ಲಿ ಒಬ್ಬರು ಖಾಸಗಿ ನರ್ಸಿಂಗ್ ಹೋಂ'ನ ಮಾಲೀಕರಾಗಿದ್ದಾರೆ.ಬಂಧಿತರು ಕಳೆದ ಮೂರು ವರ್ಷಗಳಿಂದ ಆಗ ತಾನೆ ಜನಿಸಿದ ಮಕ್ಕಳನ್ನು ಬಿಸ್ಕೇಟ್ ಪೊಟ್ಟಣಗಳಲ್ಲಿಟ್ಟು ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದರು.

ಪೊಲೀಸರು ಖಾಸಗಿ ನರ್ಸಿಂಗ್ ಹೋಂ'ಅನ್ನು ಶೋಧಿಸಿದಾಗ ಔಷಧಿಗಳ ಮಳಿಗೆಗಳ ಕೊಠಡಿಯಲ್ಲಿ ಬಿಸ್ಕೆಟ್ ಪೊಟ್ಟಣಗಳಲ್ಲಿ ನವಜಾತ ಶಿಶುಗಳನ್ನು ಇಡಲಾಗಿತ್ತು.

ನವಜತ ಶಿಶುಗಳನ್ನು ಮಾರಾಟ ಮಾಡುವ ಜಾಲದಲ್ಲಿ ಸ್ಥಳೀಯ ಎನ್'ಜಿಒ ಸಂಸ್ಥೆಯೊಂದು ಕೂಡ ಭಾಗಿಯಾಗಿದೆ. ಖಾಸಗಿ ನರ್ಸಿಂಗ್ ಹೋಂ ಮಾಲೀಕರು ಹಾಗೂ ಸಿಬ್ಬಂದಿ ಕಳೆದ ಮೂರು ವರ್ಷದಿಂದ 25ಕ್ಕೂ ಹೆಚ್ಚು ನವಜಾತ ಶಿಶುಗಳನ್ನು ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios