ವಿಶ್ವ ಯೋಗ ದಿನಾಚರಣೆಗೂ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಮ್'ದೇವ್ ಯೋಗದ ಪಾಠ ಹೇಳಿಕೊಟ್ಟಿದ್ದಾರೆ.

ನವದೆಹಲಿ(ಜೂ.15): ಯೋಗ ಗುರು ರಾಮ್'ದೇವ್, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಸೇರಿದಂತೆ ಅನೇಕರಿಗೆ ಯೋಗ ಪಾಠ ಮಾಡಿದ್ದಾರೆ. ವಿಶ್ವ ಯೋಗ ದಿನಾಚರಣೆಗೂ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಮ್'ದೇವ್ ಯೋಗದ ಪಾಠ ಹೇಳಿಕೊಟ್ಟಿದ್ದಾರೆ.

ಇಲ್ಲಿನ ಛತ್ರಸಾಲ್ ಕ್ರೀಡಾಂಗಣದಲ್ಲಿ ರಾಮ್'ದೇವ್ ಯೋಗ ಹೇಳಿಕೊಟ್ಟರು. ಇದೇ ವೇಳೆ ಕುಸ್ತಿಪಟುಗಳಿಗೆ ಸವಾಲು ಹಾಕಿ ಅವರೊಂದಿಗೆ ಸೆಣಸಾಡಿದರು. ಸುಶೀಲ್'ರನ್ನು ತಮ್ಮ ಹೆಗಲ ಮೇಲೆ ನಿರಾಯಾಸವಾಗಿ ಎತ್ತುವ ಮೂಲಕ ಯೋಗಗುರು ಎಲ್ಲರು ಹುಬ್ಬೇರಿಸುವಂತೆ ಮಾಡಿದರು.

Scroll to load tweet…

ಸುಶೀಲ್ ಸೇರಿದಂತೆ ಇತರ ಕುಸ್ತಿ ಪಟುಗಳೊಂದಿಗೆ ಕೆಲಕಾಲ ಕುಸ್ತಿ ಅಭ್ಯಾಸ ನಡೆಸಿದೆ ಹಾಗೂ ಅವರಿಗೆ ಯೋಗ ಪಾಠ ಮಾಡಿದೆ' ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಚಿತ್ರಗಳನ್ನೂ ಸಹ ಹಾಕಿದ್ದಾರೆ.