ಇತ್ತೀಚೆಗಷ್ಟೇ ಫುಟ್ಬಾಲ್‌ ಆಡಿ ಗಮನ ಸೆಳೆದಿದ್ದ ಯೋಗ ಗುರು ಬಾಬಾ ರಾಮ್‌ದೇವ್‌ ಇದೀಗ ಕುಸ್ತಿ ಅಖಾಡದಲ್ಲೂ ತಮ್ಮ ಪವರ್ ತೋರಿಸಿದ್ದಾರೆ. ಅದು ಅಂತಿಂಥವರೊಂದಿಗೆ ಅಲ್ಲ, 2008ರ ಒಲಿಂಪಿಕ್ಸ್‌ನಲ್ಲಿ ಭಾರತ ಸುಶೀಲ್‌ ಕುಮಾರ್‌ರನ್ನು ಮಣಿಸಿದ ಪ್ರಬಲ ಎದುರಾಳಿ ಆ್ಯಂಡ್ರೆ ಸ್ಟಾಡ್ನಿಕ್‌ ರನ್ನೇ ರಾಮ್ದೇವ್ ನೆಲಕ್ಕುರುಳಿಸಿದ್ದಾರೆ.
ನವದೆಹಲಿ(ಜ.19): ಇತ್ತೀಚೆಗಷ್ಟೇ ಫುಟ್ಬಾಲ್ ಆಡಿ ಗಮನ ಸೆಳೆದಿದ್ದ ಯೋಗ ಗುರು ಬಾಬಾ ರಾಮ್ದೇವ್ ಇದೀಗ ಕುಸ್ತಿ ಅಖಾಡದಲ್ಲೂ ತಮ್ಮ ಪವರ್ ತೋರಿಸಿದ್ದಾರೆ. ಅದು ಅಂತಿಂಥವರೊಂದಿಗೆ ಅಲ್ಲ, 2008ರ ಒಲಿಂಪಿಕ್ಸ್ನಲ್ಲಿ ಭಾರತ ಸುಶೀಲ್ ಕುಮಾರ್ರನ್ನು ಮಣಿಸಿದ ಪ್ರಬಲ ಎದುರಾಳಿ ಆ್ಯಂಡ್ರೆ ಸ್ಟಾಡ್ನಿಕ್ ರನ್ನೇ ರಾಮ್ದೇವ್ ನೆಲಕ್ಕುರುಳಿಸಿದ್ದಾರೆ.
ಬುಧವಾರ ಪ್ರೊ ಕುಸ್ತಿ ಲೀಗ್'ನ 2ನೇ ಸೆಮಿಫೈನಲ್ ಪಂದ್ಯದ ವೇಳೆ ನಡೆದ ಸೌಹಾರ್ದ ಪಂದ್ಯದಲ್ಲಿ ರಾಮ್'ದೇವ್ ತಮ್ಮ ಪವರ್ ತೋರಿಸಿದರು. ಒಲಿಂಪಿಕ್ಸ್ ಪದಕ ವಿಜೇತನನ್ನು 12-0 ಅಂತರದಿಂದ ಆ್ಯಂಡ್ರೆ ಸ್ಟಾಡ್ನಿಕ್ ರನ್ನು ಸೋಲಿಸಿದರು. ಯೋಗದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದನ್ನು ತೋರಿಸುವ ಸಲುವಾಗಿ ಒಲಿಂಪಿಕ್ಸ್ ಪದಕ ವಿಜೇತನ ವಿರುದ್ಧ ಹೋರಾಡಿದೆ ಎಂದು ರಾಮ್ದೇವ್ ತಿಳಿಸಿದ್ದಾರೆ.
