ಋುಷಿಕೇಶ[ಆ.24]: ಯೋಗ ಗುರು ಬಾಬಾ ರಾಮ್‌ದೇವ್‌ ಆಪ್ತ ಹಾಗೂ ಪತಂಜಲಿ ಆರ್ಯುವೇದ ಕಂಪನಿಯ ಅಧ್ಯಕ್ಷ ಬಾಲಕೃಷ್ಣ ಅವರನ್ನು ಅನಾರೋಗ್ಯ ನಿಮಿತ್ತ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎದೆನೋವು ಹಾಗೂ ತಲೆ ಸುತ್ತು ಕಾಣಿಸಿಕೊಂಡಿದ್ದರಿಂದ ಮೊದಲು ಅವರನ್ನು ಹರಿದ್ವಾರದ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ವೈದ್ಯರ ಸಲಹೆಯಂತೆ ಅವರನ್ನು ಋುಷಿಕೇಶದಲ್ಲಿರುವ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ಪತಂಜಲಿ ಯೋಗ ಪೀಠ ತಿಳಿಸಿದೆ.