ಆದರೆ ಪುಣೆ - ಮುಂಬೈ ಹೆದ್ದಾರಿಯಲ್ಲಿ ಯಾವುದೇ ಅಪಘಾತವಾಗಿಲ್ಲ ಎಂದು ಹೆದ್ದಾರಿ ನಿಯಂತ್ರಣ ಅಧಿಕಾರಿಗಳೆ ಸುದ್ದಿಸಂಸ್ಥೆಗಳಿಗೆ ದೃಢಪಡಿಸಿದ್ದಾರೆ.
ಹರಿದ್ವಾರ(ಏ.25): ಯೋಗ ಗುರು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್'ದೇವ್ ಅಪಘಾತದಲ್ಲಿ ಮರಣ ಹೊಂದಿದರೆ ? ಅಂತಹದೊಂದು ಸುಳ್ಳು ಸುದ್ದಿ ವಾಟ್ಸ್'ಪ್'ನಲ್ಲಿ ಹರಿದಾಡುತ್ತಿದೆ.
ಪುಣೆಯಿಂದ ಮುಂಬೈ'ಗೆ ಪ್ರಯಾಣ ಮಾಡುವಾಗ ಮುಂಬೈ-ಪುಣೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವಾಟ್ಸ್'ಅಪ್'ನಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೆಲವು ಭಾವಚಿತ್ರಗಳು ಕೂಡ ಇವೆಯಂತೆ. ಆದರೆ ಇದನ್ನು ಉದ್ದೇಶ'ಪೂರ್ವಕವಾಗಿ ಹರಿಯ ಬಿಡಲಾಗಿದೆಯಂತೆ.
ಆದರೆ ಪುಣೆ - ಮುಂಬೈ ಹೆದ್ದಾರಿಯಲ್ಲಿ ಯಾವುದೇ ಅಪಘಾತವಾಗಿಲ್ಲ ಎಂದು ಹೆದ್ದಾರಿ ನಿಯಂತ್ರಣ ಅಧಿಕಾರಿಗಳೆ ಸುದ್ದಿಸಂಸ್ಥೆಗಳಿಗೆ ದೃಢಪಡಿಸಿದ್ದಾರೆ.ಬಾಬಾ ಅವರು ಕಪ್ಪುಹಣದ ವಿರುದ್ಧ 6 ವರ್ಷದ ಹಿಂದೆ ಉಪವಾಸ ಮಾಡಿದಾಗ ಸ್ಟ್ರೆಚರ್ ಮೇಲೆ ಆಸ್ಪತ್ರೆ ಸೇರಿಸಿದ ಚಿತ್ರ ಅದಾಗಿದೆ. ಇನ್ನೊಂದು ಚಿತ್ರ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಏ.18ರಂದು ಸಂಭವಿಸಿದ ಕಾರು ಅಪಘಾತದ್ದಾಗಿದೆ.

ಈ ನಡುವೆ ಸ್ವತಃ ಬಾಬಾ ರಾಮ್'ದೇವ್ ಅವರೆ ಟ್ವೀಟ್ ಮಾಡಿದ್ದು, ತಾವು ಹರಿದ್ವಾರದಲ್ಲಿ ಸಾವಿರಾರು ಭಕ್ತರಿಗೆ ಯೋಗ ಹೇಳಿಕೊಡುತ್ತಿದ್ದು, ನಾನು ಆರೋಗ್ಯವಾಗಿದ್ದೇನೆ. ವದಂತಿಗಳನ್ನು ನಂಬಬೇಡಿ ಎಂದು' ಭಕ್ತರಿಗೆ ಮನವಿ ಮಾಡಿದ್ದಾರೆ.
