Asianet Suvarna News Asianet Suvarna News

ನವೆಂಬರ್ ಬಳಿಕ ಬಿಎಸ್ ವೈ ಸಿಎಂ : ಬಾಬುರಾವ್ ಚಿಂಚನಸೂರ್

ದೇಶ ಕಂಡ ಅತ್ಯಂತ ಕೆಟ್ಟ ಸಿಎಂ ಸಿದ್ದ ರಾಮಯ್ಯ ಎಂದು ದೇವೇಗೌಡರು ಜರಿದಿದ್ದರು. ರಾಜಕೀಯ ಕುತಂತ್ರದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ದೂರಿದ್ದರು. ಹೀಗಿರುವಾಗ ಸರ್ಕಾರದಲ್ಲಿ ಹೊಂದಾಣಿಕೆ ಸಾಧ್ಯವೇ - ಬಾಬುರಾವ್ ಚಿಂಚನಸೂರ್ 

B.S. Yeddyurappa Will Become Chief Minister In Next month
Author
Bengaluru, First Published Oct 28, 2018, 3:00 PM IST
  • Facebook
  • Twitter
  • Whatsapp

ಶಿವಮೊಗ್ಗ[ಅ.28]: ಪರಸ್ಪರ ಒಪ್ಪಂದದ ಮೇರೆಗೆ ಮದುವೆಯಾಗಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಸಂಸಾರ ನಡೆಸುವುದಿಲ್ಲ. ಯಾವಾಗಾದರೂ ವಿಚ್ಛೇದನ ಸಾಧ್ಯತೆ ಇದೆ ಎಂದು ಶಾಸಕ ಬಾಬುರಾವ್ ಚಿಂಚನಸೂರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಇಂದು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಕುಮಾರಸ್ವಾಮಿ ಸರ್ಕಾರ ಮಿಲಿ-ಜುಲಿ ಆಗಿದೆ ಎಂದರು. ದೇಶ ಕಂಡ ಅತ್ಯಂತ ಕೆಟ್ಟ ಸಿಎಂ ಸಿದ್ದ ರಾಮಯ್ಯ ಎಂದು ದೇವೇಗೌಡರು ಜರಿದಿದ್ದರು. ರಾಜಕೀಯ ಕುತಂತ್ರದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ದೂರಿದ್ದರು. ಹೀಗಿರುವಾಗ ಸರ್ಕಾರದಲ್ಲಿ ಹೊಂದಾಣಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ದಲ್ಲಿ ಹೊಂದಾಣಿಕೆಯೇ ಇಲ್ಲ ವಾಗಿದೆ. ಸರ್ಕಾರ ಸದ್ಯದಲ್ಲೇ ಪತನವಾಗುತ್ತದೆ. ನವಂಬರ್ ಬಳಿಕ ಬಿ.ಎಸ್. ಯಡಿಯೂರಪ್ಪ ರಾಜ್ಯದ ಸಿಎಂ ಆಗುವುದು ಖಚಿತ. ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ಬಿಜೆಪಿ ಗೆಲುವು ಖಚಿತ. ಮಂಡ್ಯ, ರಾಮನಗರ ಕ್ಷೇತ್ರ ದಲ್ಲೂ ಪವಾಡ ನಡೆಯಲಿದೆ. ಫಲಿತಾಂಶ ಬಿಜೆಪಿ ಪರ ಇರಲಿದೆ ಎಂದರು.

ಗಂಗಾಮತಸ್ಥ ಸಮಾಜಕ್ಕೆ ಸೇರಿದ ರಾಮನಾಥ ಕೋವಿಂದ ಅವರಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಹುದ್ದೆ ನೀಡಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಕೆಲಸ ಮಾಡಿದ್ದಾರೆ ಎಂದರು. ರಾಮಣ್ಣ ನಾಯಕವಾಡಿ, ಕೆಂಚಪ್ಪ, ಕುಮಾರ್, ಸತೀಶ್ ಗಾಂಧಿ, ಶ್ರೀನಿವಾಸ್, ಹಿರಣ್ಣಯ್ಯ ಇದ್ದರು.

B.S. Yeddyurappa Will Become Chief Minister In Next month

Follow Us:
Download App:
  • android
  • ios