ಬೆಂಗಳೂರು[ಜು.25]  ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪಗೆ ಸರ್ಕಾರಿ ಬಂಗಲೆ ಹಂಚಿಕೆ ಮಾಡಲಾಗಿದೆ. #3 ಕುಮಾರಕೃಪ ದಕ್ಷಿಣ ವಸತಿ ಗೃಹ  ನೀಡಲಾಗಿದೆ. ಇದಕ್ಕು ಮೊದಲು #4 ರೇಸ್ ಕೋರ್ಸ್ ರಸ್ತೆ ವಸತಿ ಗೃಹ ಹಂಚಿಕೆ ಮಾಡಲಾಗಿತ್ತು . ಆದರೆ ಅಲ್ಲಿಗೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು.

ಯಡಿಯೂರಪ್ಪಗೆ ಈಗ ನೀಡಿರುವ ನಿವಾಸದಲ್ಲಿ ಹಿಂದಿನ ಸರಕಾರದ ವೇಳೆ ಸಚಿವ ಜಾರ್ಜ್ ವಾಸವಿದ್ದರು. ಒಟ್ಟಿನಲ್ಲಿ ಬಿಎಸ್ ವೈ ಮತ್ತು ಸರಕಾರದ ನಡುವಿನ ಮನೆ ಸಮರ ಮತ್ತೆ ರಾಜಕಾರಣದ ಕೆಸರು ಎರಚಾಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ.

ಹಾಗಾಗಿ ಮತ್ತೆ ಬೇರೆ ನಿವಾಸ ಹಂಚಿಕೆ ಮಾಡಲಾಗಿದೆ. ಆದರೆ ಯಡಿಯೂರಪ್ಪ ಕೇಳಿರುವುದು ರೇಸ್ ಕೋರ್ಸ್ ರೋಡ್ ರೇಸ್ ವ್ಯೂವ್ ಕಾಟೇಜ್ 2 ನಿವಾಸವಾಗಿತ್ತು. ಈ ನಿವಾಸವನ್ನು ಈಗಾಗಲೇ ಸಚಿವ ಸಾರಾ ಮಹೇಶ್ ಗೆ ಹಂಚಿಕೆ ಮಾಡಲಾಗಿದೆ. ಹಾಗಾಗಿ ಹಂಚಿಕೆ ಮಾಡಿರುವ ನಿವಾಸಕ್ಕೆ ಬಿಎಸ್ ವೈ ಹೋಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.