ಎಚ್ ಡಿಕೆ ಮನೆಗೂ ಕಳುಹಿಸುವವರೆಗೂ ಬಿಡಲ್ಲ: ಬಿಎಸ್‌ವೈ

ಸುಳ್ಳು ಭರವಸೆ ನೀಡಿ  ಜೆಡಿಎಸ್ 37 ಸ್ಥಾನ ಗಳಿಸಿದೆ. ಕುಮಾರ ಸ್ವಾಮಿ ಬಣ್ಣ ಬಯಲು ಮಾಡುವವರೆಗೂ ಬಿಡಲ್ಲ. ಲೋಕಸಭೆ ಗೆಲ್ಲುವವರೆಗೆ ಮನೆಗೆ ಹೋಗಲ್ಲ. ಲೋಕಸಭಾ ಚುನಾವಣೆಗೂ ಮುನ್ನಾ ರಾಜ್ಯ ರಾಜಕಾರಣದಲ್ಲಿ ಏರುಪೇರಾಗಬಹುದು .ಕಾದು ನೋಡೋಣ ಎಂದು ಬಿಎಸ್ ವೈ ಹೇಳಿದ್ದಾರೆ.  

B S Yadiyurappa Slams CM Kumaraswamy

ಬಳ್ಳಾರಿ (ಆ. 11):  ರಾಜ್ಯದ ಇತಿಹಾಸದಲ್ಲಿ 104 ಜನ ಶಾಸಕರ ಇದ್ದವರು ವಿರೋಧಪಕ್ಷದಲ್ಲಿದ್ದೇವೆ. ದೇವೇಗೌಡರ ಕಾಲಿಗೆ ಬಿದ್ದು, ಬೇಷರತ್ತು ಬೆಂಬಲದಿಂದ ಅಧಿಕಾರ ಪಡೆದುಕೊಂಡರು.  ಕುಮಾರ ಸ್ವಾಮಿ ಬಗ್ಗೆ ಕಾಂಗ್ರೆಸ್,  ಕಾಂಗ್ರೆಸ್ ಬಗ್ಗೆ ಕುಮಾರ ಸ್ವಾಮಿ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ.   

ಜಿಲ್ಲಾ ಉಸ್ತುವಾರಿ ಸಚಿವರು ಮಾಡುವ ಕೆಲಸ ಪ್ರತಿ ಪಕ್ಷದವರಾಗಿ ನಾವು ಮಾಡುತ್ತಿದ್ದೇವೆ. ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಸರ್ಕಾರದ ಮೂಗು ಹಿಡಿದು ಹೋರಾಟ ಮಾಡುತ್ತೇವೆ. ಸಭೆ ಸಮಾರಂಭಗಳಿಂದ ಸರ್ಕಾರ ಬಗ್ಗಲ್ಲ. ಹೋರಾಟ ಮಾಡಬೇಕು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗುವವರೆಗೆ ಹೋರಾಟ ನಿಲ್ಲದು. ಅನಿಷ್ಟ ಸರ್ಕಾರ ಯಾವಾಗ ಹೋಗುತ್ತದೋ ಎಂದು ಜನ ಕಾಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.   

ಲೋಕಸಭೆಯಲ್ಲಿ ಅವಿಶ್ವಾಸ ಮಂಡಿಸಿ ಕಾಂಗ್ರೆಸ್ ‌ಮುಖಭಂಗ ಅನುಭವಿಸಿತು. ರಾಜ್ಯದಲ್ಲಿ ಯಾವ ಕಾಮಗಾರಿಯೂ ನಡೆಯುತ್ತಿಲ್ಲ. ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಿಂಗ್ ರೋಡ್ ಸೇರಿದಂತೆ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿಲ್ಲ. ರಾಜಕೀಯ ದೊಂಬರಾಟ ನಡೆಯುತ್ತಿದೆ ಎಂದು ಬಿಎಸ್ ವೈ ಹೇಳಿದ್ದಾರೆ.   

ಲೋಕಸಭೆಯಲ್ಲಿ ಗೆಲ್ಲಬೇಕು. ಅಭ್ಯರ್ಥಿ ಯಾರೆಂದು ತಿಳಿಸುತ್ತವೆ ಅವರಿಗೆ ಬೆಂಬಲಿಸಿ. ಅಮಿತ್ ಷಾ ಮೋದಿ  ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಕಾರ್ಯಕರ್ತರಿಗೆ ಬಿಎಸ್ ವೈ ನೀತಿ ಪಾಠ ಹೇಳಿದ್ದಾರೆ.  

ಸುಳ್ಳು ಭರವಸೆ ನೀಡಿ  ಜೆಡಿಎಸ್ 37 ಸ್ಥಾನ ಗಳಿಸಿದೆ. ಕುಮಾರ ಸ್ವಾಮಿ ಬಣ್ಣ ಬಯಲು ಮಾಡುವವರೆಗೂ ಬಿಡಲ್ಲ. ಲೋಕಸಭೆ ಗೆಲ್ಲುವವರೆಗೆ ಮನೆಗೆ ಹೋಗಲ್ಲ.  ಲೋಕಸಭಾ ಚುನಾವಣೆಗೂ ಮುನ್ನಾ ರಾಜ್ಯ ರಾಜಕಾರಣದಲ್ಲಿ ಏರುಪೇರಾಗಬಹುದು .ಕಾದು ನೋಡೋಣ ಎಂದು ಬಿಎಸ್ ವೈ ಹೇಳಿದ್ದಾರೆ.  

Latest Videos
Follow Us:
Download App:
  • android
  • ios