ಪರವಾನಿಗೆ ಪಡೆದ ಕಸಾಯಿಖಾನೆಯಲ್ಲಿ ಪ್ರಾಣಿಗಳನ್ನು ಕೊಲ್ಲಬಹುದು ಆದರೆ ಅನಧಿಕೃತ ಕಸಾಯಿಖಾನೆಗಳಲ್ಲಿ ಪ್ರಾಣಿಯನ್ನು ಕೊಂದರೆ ತಪ್ಪು? ಇದರ ಅರ್ಥವೇನು? ಆದುದರಿಂದ ಎಲ್ಲಾ ಕಸಾಯಿಗಳನ್ನು ಮುಚ್ಚಬೇಕು, ಎಂದು ಅವರು ಹೇಳಿದ್ದಾರೆ.

ನವದೆಹಲಿ (ಮಾ.27): ಪ್ರಾಣಿವಧೆಗೆ ಸಂಬಂಧಿಸಿ ದೇಶದಾದ್ಯಂತ ಏಕರೂಪ ಕಾನೂನು ಜಾರಿಗೊಳಿಸುವಂತೆ ಸಮಾಜವಾದಿ ಪಕ್ಷದ ಮುಖಂಡ ಜಮ್ ಖಾನ್ ಆಗ್ರಹಿಸಿದ್ದಾರೆ.

ಗೋವಧೆಯನ್ನು ಎಲ್ಲಾ ರಾಜ್ಯಗಳಲ್ಲಿ ನಿಷೇಧಿಸಬೇಕು. ಯಾವುದೇ ಪ್ರಾಣಿಯ ವಧೆ ನಡೆಸಬಾರದು. ಕಾನೂನುಬದ್ಧ ಅಥವಾ ಕಾನೂನುಬಾಹಿರ ವಧೆ ಎಂದರೇನು? ಎಲ್ಲಾ ವಧಾಗೃಹಗಳನ್ನು ಮುಚ್ಚಬೇಕು, ಎಂದು ಅವರು ಹೇಳಿದ್ದಾರೆ.

ಪರವಾನಿಗೆ ಪಡೆದ ಕಸಾಯಿಖಾನೆಯಲ್ಲಿ ಪ್ರಾಣಿಗಳನ್ನು ಕೊಲ್ಲಬಹುದು ಆದರೆ ಅನಧಿಕೃತ ಕಸಾಯಿಖಾನೆಗಳಲ್ಲಿ ಪ್ರಾಣಿಯನ್ನು ಕೊಂದರೆ ತಪ್ಪು? ಇದರ ಅರ್ಥವೇನು? ಆದುದರಿಂದ ಎಲ್ಲಾ ಕಸಾಯಿಗಳನ್ನು ಮುಚ್ಚಬೇಕು, ಎಂದು ಅವರು ಹೇಳಿದ್ದಾರೆ.

ಮುಸ್ಲಿಮರಿಗೆ ಮಾಂಸಾಹಾರವನ್ನು ತ್ಯಜಿಸಲು ಕರಡಕೊಟ್ಟಿರುವ ಅಜಂ ಖಾನ್, ಇಸ್ಲಾಮ್ ಧರ್ಮದಲ್ಲಿ ಮಾಂಸ ಸೇವನೆ ಕಡ್ಡಾಯವೇನು ಅಲ್ಲ, ಆದುದರಿಂದ ಮಾಂಸಾಹಾರ ಸೇವನೆಯನ್ನು ತ್ಯಜಿಸುಇವಂತೆ ನಾನು ಮುಸ್ಲಿಮರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ, ಎಂದು ಹೇಳಿದ್ದಾರೆ.