ಪ್ರಸಿದ್ಧ ಅಯ್ಯಪ್ಪ ದೇವಸ್ಥಾನದಲ್ಲಿ ‘ಮಂಡಲ ಪೂಜೆ’ ಉತ್ಸವದ ಪ್ರಯುಕ್ತ ಮಂಗಳವಾರ ಸಾವಿರಾರು ಭಕ್ತರು ಆಗಮಿಸಿ, ಪ್ರಾರ್ಥನೆ ಸಲ್ಲಿಸಿದರು.

ಶಬರಿಮಲೆ (ಡಿ.27): ಪ್ರಸಿದ್ಧ ಅಯ್ಯಪ್ಪ ದೇವಸ್ಥಾನದಲ್ಲಿ ‘ಮಂಡಲ ಪೂಜೆ’ ಉತ್ಸವದ ಪ್ರಯುಕ್ತ ಮಂಗಳವಾರ ಸಾವಿರಾರು ಭಕ್ತರು ಆಗಮಿಸಿ, ಪ್ರಾರ್ಥನೆ ಸಲ್ಲಿಸಿದರು.

3 ತಿಂಗಳ ಅವಧಿಯ ವಾರ್ಷಿಕ ಯಾತ್ರೆ ಸಲುವಾಗಿ ಆರಂಭಿಕ ಹಂತದ ಕೊನೆಯ ದಿನ ಸಾವಿರಾರು ಜನ ಆಗಮಿಸಿದ್ದರು. ಪೂಜೆ ಪೂರ್ತಿಗೊಂಡ ಬಳಿಕ ದೇವಸ್ಥಾನ ಶನಿವಾರ (ಡಿ.30) ಸಂಜೆ ವರೆಗೆ ಮುಚ್ಚಲ್ಪಟ್ಟಿತು.

ಜ.14ರಂದು ನಡೆಯುವ ಮಕರ ಜ್ಯೋತಿ ಉತ್ಸವಕ್ಕಾಗಿ, ಶನಿವಾರ ಸಂಜೆ ಮತ್ತೆ ದೇವಸ್ಥಾನದ ಬಾಗಿಲು ತೆರೆಯಲಿದೆ. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಪಠಿಸುತ್ತಾ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.