ಇಂದು ರಾಜ್ಯದೆಲ್ಲೆಡೆ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಅದರಲ್ಲೂ ಇಂದು ಆಯುಧ ಪೂಜೆಯನ್ನ ಭಾರಿ ವಿಶೇಷವಾಗಿ ಬೆಂಗಳೂರು ಮಂದಿ ಆಚರಣೆ ಮಾಡಿದರು.
ಬೆಂಗಳೂರು (ಸೆ.29): ಇಂದು ರಾಜ್ಯದೆಲ್ಲೆಡೆ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಅದರಲ್ಲೂ ಇಂದು ಆಯುಧ ಪೂಜೆಯನ್ನ ಭಾರಿ ವಿಶೇಷವಾಗಿ ಬೆಂಗಳೂರು ಮಂದಿ ಆಚರಣೆ ಮಾಡಿದರು.
ಬೆಂಗಳೂರಿನಲ್ಲಿ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿತ್ತು. ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರು ತಮ್ಮ ತಮ್ಮ ವಾಹನಗಳನ್ನು ಹೂವಿನಿಂದ ಅಲಂಕರಿಸಿ ಬೆಳಗ್ಗೆಯಿಂದಲೂ ಪೂಜೆ ತೊಡಗಿಸಿದ್ದರು. ಪ್ರತೀ ವರ್ಷದಂತೆ ಈ ವರ್ಷವೂ ಯುಬಿ ಸಿಟಿ ಬಳಿ ಇರೋ ಆಕ್ಸಿಡೆಂಟ್ ಗಣಪತಿ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಇಲ್ಲಿ ವಾಹನಗಳಿಗೆ ಪೂಜೆ ಮಾಡಿದರೆ ವಾಹನ ಭಾಗ್ಯ ಸಿಗುತ್ತೆ ಅಪಘಾತವಾಗಲ್ಲ ಅನ್ನೋ ನಂಬಿಕೆ ಇದೆ. ಹೀಗಾಗಿ ಸಿಲಿಕಾನ್ ಸಿಟಿ ಜನತೆ ಆಕ್ಸಿಡೆಂಟ್ ಗಣಪನ ದರ್ಶನ ಪಡೆದು ವಾಹನಗಳಿಗೆ ವಿಶೇಷ ಪೂಜೆ ಮಾಡಿಸಿದರು.
ಜಯನಗರ ಅಗ್ನಿ ಶಾಮಕದಳ ಕಚೇರಿಯಲ್ಲೂ ಆಯುಧ ಪೂಜೆ ನೆರೆವೇರಿಸಲಾಯಿತು. ಅಗ್ನಿಶಾಮಕ ದಳ ವಾಹನಗಳಿಗೆ ಹೂಗಳಿಂದ ಸಿಂಗರಿಸಿ, ವಿಶೇಷ ಪೂಜೆಯನ್ನ ಸಲ್ಲಿಸಿದರು. ಅಷ್ಟೇ ಅಲ್ಲ ಸಿದ್ದಾಪುರ ಪೊಲೀಸ್ ಠಾಣೆಯಲ್ಲೂ , ಪೊಲೀಸ್ ಸಿಬ್ಬಂದಿಗಳು ಆಯುಧ ಪೂಜೆ ಮಾಡಿದ್ರು. ಠಾಣೆಯಲ್ಲಿರುವ ಆಯುಧಗಳಾದ ರೈಫಲ್, ಕೈಕೊಳ್ಳ, ಬುಲೆಟ್ಸ್ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಒಟ್ಟಿನಲ್ಲಿ, ಸಿಲಿಕಾನ್ ಸಿಟಿ ಮಂದಿ ಆಯುಧ ಪೂಜೆಯನ್ನ ಶ್ರದ್ಧೆ, ಶಕ್ತಿಯಿಂದ ಪೂಜಿಸುವ ಮೂಲಕ ಹಬ್ಬವನ್ನ ಆರ್ಚನೆ ಮಾಡಿದರು.
