ಉಡುಪಿಯಲ್ಲಿ ನ.24, 25 ಮತ್ತು 26ರಂದು ನಡೆಯುವ ರಾಷ್ಟ್ರೀಯ ಧರ್ಮ ಸಂಸತ್‌ನಲ್ಲಿ ದೇಶದಾದ್ಯಂತ ದಿಂದ 2500ಕ್ಕೂ ಹೆಚ್ಚು ಮಂದಿ ಸಾಧುಸಂತರು, ಮಹಾಂತರು, ಮಠಾಧೀಶರು ಭಾಗವಹಿಸಲಿದ್ದು ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ(ಆ.13): ಉಡುಪಿಯಲ್ಲಿ ನ.24, 25 ಮತ್ತು 26ರಂದು ನಡೆಯುವ ರಾಷ್ಟ್ರೀಯ ಧರ್ಮ ಸಂಸತ್ನಲ್ಲಿ ದೇಶದಾದ್ಯಂತ ದಿಂದ 2500ಕ್ಕೂ ಹೆಚ್ಚು ಮಂದಿ ಸಾಧುಸಂತರು, ಮಹಾಂತರು, ಮಠಾಧೀಶರು ಭಾಗವಹಿಸಲಿದ್ದು ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮೂರನೇ ಪರ್ಯಾಯೋತ್ಸವದ ಸಂದರ್ಭದಲ್ಲಿ ಪ್ರಥಮ ಧರ್ಮಸಂಸತ್ ಉಡುಪಿಯಲ್ಲೇ ನಡೆದಿತ್ತು. ಆಗ ಶ್ರೀ ರಾಮ ಮಂದಿರದ ಬೀಗ ತೆರೆಯುವ ನಿರ್ಣಯ ಕೈಗೊಳ್ಳಲಾಗಿತ್ತು. ಅದರ ಪರಿಣಾಮವಾಗಿ ಉತ್ತರ ಪ್ರದೇಶದ ಆಗಿನ ಸರ್ಕಾರ ತಾನೇ ರಾಮಮಂದಿರದ ಬೀಗ ತೆರೆದುಕೊಟ್ಟಿತ್ತು. ಈ ಬಾರಿ ರಾಮಮಂದಿರ ನಿರ್ಮಾಣದ ಬಗ್ಗೆ ನಿರ್ಣಯ ಆಗಲಿದೆ ಎಂಬ ಭರವಸೆಯನ್ನು ಶ್ರೀಗಳು ವ್ಯಕ್ತಪಡಿಸಿದರು.
ತಾವೂ ಸೇರಿದಂತೆ ದೇಶದ ಎಲ್ಲಾ ಸಾ‘ುಸಂತರಿಗೆ ರಾಮ ಮಂದಿರ ಅಲ್ಲೇ ನಿರ್ಮಾಣಗೊಳ್ಳಬೇಕು ಎಂಬ ಏಕಮತ ಇದೆ. ಈ ಹಿನ್ನೆಲೆಯಲ್ಲಿ ನಿರ್ಣಯ ಆಗಲಿದೆ ಎಂಬುದು ತಮ್ಮ ಆಪೇಕ್ಷೆ ಎಂದು ಶ್ರೀಗಳು ಹೇಳಿದರು. ಮೊದಲ ದಿನವಿಡೀ ಸಮಾವೇಶದಲ್ಲಿ ಆರ್ ಎಸ್ಎಸ್ನ ವರಿಷ್ಠ ನಾಯಕ ಮೋಹನ್ ಭಾಗವತ್ ಭಾಗವಹಿಸಲಿದ್ದು, ಕೊನೇ ದಿನ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ರಾಜಕೀಯ ಬಣ್ಣ ತಾಕಿಸಬೇಡಿ: ಹೆಗ್ಗಡೆ ಸಲಹೆ
ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಷ್ಟ್ರೀಯ ‘ರ್ಮ ಸಂಸತ್ ಸಮ್ಮೇಳನಕ್ಕೆ ರಾಜಕೀಯದ ಬಣ್ಣ ತಾಕದಂತೆ ಎಚ್ಚರವಹಿಸಬೇಕು. ಎಲ್ಲಾ ಪಕ್ಷಗಳಲ್ಲಿರುವ ಹಿಂದೂಗಳು ರಾಜಕೀಯ ರಹಿತರಾಗಿ ಈ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಸಮಾವೇಶದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಪೇಜಾವರ ಮಠದಲ್ಲಿ ನಡೆದ ಧರ್ಮ ಸಂಸತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಪ್ರತಿಯೊಂದು ಘಟನೆಗಳ ಹಿಂದೆ ಜಾತಿಯನ್ನು ಹುಡುಕುವ, ಸಂಬಂಧಪಟ್ಟ ಜಾತಿವರು ಮಾತ್ರ ಈ ಘಟನೆಯ ಬಗ್ಗೆ ಹೋರಾಟ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಗೆ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜದ ಎಲ್ಲರೂ ಜಾತಿ ಭೇದ ಮರೆತು ಸ್ಪಂದಿಸಬೇಕು ಎಂದ ಹೆಗ್ಗಡೆ, ಧರ್ಮ ಸಂಸತ್ನಲ್ಲಿ ಸಂಕುಚಿತ ದೃಷ್ಟಿ ಕೋನ ಬಿಟ್ಟು ವಿಶಾಲ ದೃಷ್ಟಿ ಕೋನದೊಂದಿಗೆ ‘ಾಗವಹಿಸೋಣ ಎಂದರು. ಈ ಸಂದ‘ರ್ದಲ್ಲಿ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿದ ಸ್ವಾಗತ ಸಮಿತಿಯ ಅ‘್ಯಕ್ಷ ಪೇಜಾವರ ಶ್ರೀಗಳು ಬಿಡುಗಡೆ ಮಾಡಿದರು. ವಿಶ್ವ ಹಿಂದೂ ಪರಿಷತ್ತಿಗೆ ೫೦ ವರ್ಷ ತುಂಬುತ್ತಿರುವ ಸಂದ‘ರ್ದಲ್ಲಿ ಈ ‘ರ್ಮ ಸಂಸತ್ ವಿಶೇಷ ಮಹತ್ವ ಇದೆ ಎಂದರು. ವಿಹಿಂಪದಿಂದಾಗಿ ಜಾತಿ ಮತಗಳ ಭೇದ ಕಡಿಮೆಯಾಗಿ ಸಮಗ್ರ ಸಮಾಜ ಸ್ಥಾಪನೆಯಾಗಿದೆ ಎಂದರು.
