ಅಯೋಧ್ಯೆ ಧರ್ಮಸಭಾ ಕಾರ್ಯಕ್ರಮ ಅಂತ್ಯ! ರಾಮ ಮಂದಿರ ನಿರ್ಮಾಣಕ್ಕೆ ಹೆಚ್ಚಾದ ಒತ್ತಡ! ಸುಗ್ರೀವಾಜ್ಞೆಗಾಗಿ ವಿಹೆಚ್ ಪಿ, ಶಿವಸೇನೆ ಆಗ್ರಹ! ಧರ್ಮಸಭಾ ಕಾರ್ಯಕ್ರಮದಲ್ಲಿ 3 ಲಕ್ಷ ಭಕ್ತಾದಿಗಳು! ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರ ನಿರ್ಮಾಣದ ಶಪಥ
ಅಯೋಧ್ಯೆ(ನ.25): ಅಯೋಧ್ಯೆಯಲ್ಲಿ ನಡೆದ ಧರ್ಮಸಭಾ ಕಾರ್ಯಕ್ರಮ ಅಂತ್ಯಗೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆಯನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.
ಮಂತ್ರ ಘೋಷಗಳೊಂದಿಗೆ ಪ್ರಾರಂಭವಾದ ಧರ್ಮಸಭಾ ಕಾರ್ಯಕ್ರಮದಲ್ಲಿ 3 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಪಟ್ಟನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.
ಇನ್ನು ಧರ್ಮಸಭಾದಲ್ಲಿ ಪಾಲ್ಗೊಂಡಿದ್ದ ಶಿವಸೇನೆ ಕೂಡ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದೆ. ನಿನ್ನೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪರಿವಾರ ಸಮೇತ ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
