ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದು,  ಈ ಮೈತ್ರಿ ಸರ್ಕಾರ ಬಸ್ ಇದ್ದಹಾಗಿದೆ.  ಸಿದ್ದರಾಮಯ್ಯ ಕಂಡಕ್ಟರ್ ಆಗಿದ್ದು , ಕುಮಾರ ಸ್ವಾಮಿ ಡ್ರೈವರ್ ಆಗಿದ್ದಾರೆ.  ಸಿದ್ದ ರಾಮಯ್ಯ  ರೈಟ್ ಹೇಳದೆ ಬಸ್ ಮುಂದೆ ಹೋಗುವುದಿಲ್ಲ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. 

ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಈ ಬಸ್ ಯಾವಾಗ ಕೆಟ್ಟು ನಿಲ್ಲುತ್ತದೆಯೋ ಎನ್ನುವುದನ್ನು ಹೇಳಲಾಗದು ಎಂದು  ಕಾಂಗ್ರೆಸ್ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. 

ಇದಕ್ಕೆ ನಮ್ಮದು ಬಸ್ ಅಲ್ಲ ರೈಲು ಎಂದು ಧರ್ಮಸೇನಾ ಹೇಳಿದ್ದು, ಈ ಮಾತಿಗೆ  ಜೆಡಿಎಸ್ ಮುಖಂಡ ಶರವಣ ಧ್ವನಿಗೂಡಿಸಿ ನಮ್ಮದು ಡಬಲ್ ಇಂಜಿನ್ ರೈಲು ಎಂದರು. 

ಇದಕ್ಕೆ ತಿರುಗೇಟು ನೀಡಿದ ಆಯನೂರು ಮಂಜುನಾಥ್ ಒಂದು ಇಂಜಿನ್ ಯಾವಾಗ ಕಳಚಿ ಬಿಜೆಪಿ ಜೊತೆಗೆ ಬರುತ್ತದೆಯೋ ತಿಳಿದಿಲ್ಲ. ಈಗಾಗಲೇ   ಸಿಎಂ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಜೊತೆ ಬರಲು ಜೆಡಿಎಸ್ ಸಿದ್ದವಿದೆ ಎಂದು ಪರೋಕ್ಷವಾಗಿ ಶರವಣ ಅವರಿಗೆ ಆಯನೂರು ಮಂಜುನಾಥ್ ಟಾಂಗ್ ಕೊಟ್ಟಿದ್ದಾರೆ.