ಶೀಘ್ರವೆ ಕಾಂಗ್ರೆಸ್’ಗೆ ಅಪ್ಪಳಿಸಲಿದೆ ಸಿಡಿಲಬ್ಬರದ ನ್ಯೂಸ್ : ಆಯನೂರು ಮಂಜುನಾಥ್

First Published 17, Mar 2018, 1:30 PM IST
Ayanur Manjunath Talk ABout BSY Breaking News
Highlights

ಶಿವಮೊಗ್ಗದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಅಯನೂರು ಮಂಜುನಾಥ ಬಿಎಸ್ ವೈ ರವರ ಬ್ರೇಕಿಂಗ್ ನ್ಯೂಸ್ ಬಿಡುಗಡೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗ : ಶಿವಮೊಗ್ಗದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಅಯನೂರು ಮಂಜುನಾಥ ಬಿಎಸ್ ವೈ ರವರ ಬ್ರೇಕಿಂಗ್ ನ್ಯೂಸ್ ಬಿಡುಗಡೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ತಾತ್ಕಾಲಿಕವಾಗಿ ಬ್ರೆಕಿಂಗ್ ನ್ಯೂಸ್ ನೀಡುವ ವಿಚಾರ ಮುಂದಕ್ಕೆ ಹೋಗಿದೆ. ಸದ್ಯದಲ್ಲೇ ಕಾಂಗ್ರೆಸ್ ಮೇಲೆ ಬ್ರೇಕಿಂಗ್ ನ್ಯೂಸ್ ಸಿಡಿಲಬ್ಬರದಂತೆ ಎರಗಲಿದೆ.  ಪ್ರಧಾನಿ ಮೋದಿ, ಬಿಎಸ್ ವೈ ಹಾಗೂ ಈಶ್ವರಪ್ಪನವರ ವಿರುದ್ಧ ಹಗುರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಮತ್ತವರ ಪಕ್ಷದ ಮೇಲೆ ಒಂದು ಸ್ಫೋಟಕ ಸುದ್ದಿ ಸಿಡಿಲಂತೆ ಅಪ್ಪಳಿಸಲಿದೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

ನಿನ್ನೆ ಬಿಡುಗಡೆಯಾದ ಬ್ರೇಕಿಂಗ್ ನ್ಯೂಸ್ ಸುದ್ದಿ ಅದಲ್ಲ. ಅದು ರಾಜಕೀಯ ಹೋರಾಟದ ಭಾಗ ಅಷ್ಟೆ,  ಬ್ರೇಕಿಂಗ್ ನ್ಯೂಸ್ ಬಿಡುಗಡೆಗೆ ಸಿದ್ದತೆಗಳು ಇದ್ದವು. ಆದರೆ ಅಂಶಗಳ ಕ್ರೂಢಿಕರಣ ಇರಲಿಲ್ಲ. ಹಾಗಾಗಿ ಮುಂದೆ ಹೋಗಿದೆ.

ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯ ಟ್ವೀಟರ್ ನಿಂದಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಪ್ರಧಾನಿ ಮೋದಿ ಹೇಳಿರುವ 10ಪರ್ಸೆಂಟ್ ಸರ್ಕಾರ ಎಂಬ ಆರೋಪ ಸಾಬೀತಾಗಿದೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

loader