ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್'ಗಳದ್ದೇ ಹವಾ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಸುರಕ್ಷಿತ ರಸ್ತೆ ಸಂಚಾರದ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಟ್ರಾಲ್ ಮಾರ್ಗವನ್ನೇ ಅನುಸರಿಸಿವೆ.

ಬೆಂಗಳೂರು (ಸೆ.28): ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್'ಗಳದ್ದೇ ಹವಾ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಸುರಕ್ಷಿತ ರಸ್ತೆ ಸಂಚಾರದ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಟ್ರಾಲ್ ಮಾರ್ಗವನ್ನೇ ಅನುಸರಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಬ್ಲ್ಯೂಡಬ್ಲ್ಯೂಇ, ಗೇಮ್ ಆಫ್ ಥ್ರೋನ್, ಸೂಪರ್ ಹೀರೋಗಳು, ಹಾಲಿವುಡ್ ಸಿನಿಮಾ, ಕ್ರಿಕೆಟ್ ಸೇರಿದಂತೆ ಯುವಕರನ್ನು ಆಕರ್ಷಿಸಿರುವ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಟ್ರಾಲ್ ಮೂಲಕ ಸಂದೇಶ ರವಾನಿಸಲು ಬೆಗಳೂರು ಪೊಲೀಸರು ಮುಂದಾಗಿದ್ದಾರೆ. ಟ್ವಿಟರ್ ಹಾಗೂ ಫೇಸ್ ಬುಕ್ ಗಳಲ್ಲಿ ಈ ಟ್ರಾಲ್ ಸಂದೇಶಗಳು ಸಾಕಷ್ಟು ಗಮನ ಸೆಳೆಯುತ್ತಿದ್ದು, ಬೆಂಗಳೂರು ಪೊಲೀಸರ ಪ್ರಯತ್ನ ವಿಭಿನ್ನವಾಗಿದೆ. ಈ ಮೂಲಕವಾದರೂ ಟ್ರಾಫಿಕ್ ಉಲ್ಲಂಘನೆಯನ್ನು ತಡೆಗಟ್ಟಬಹುದು ಅನ್ನೋದು ಟ್ರಾಫಿಕ್ ಪೊಲೀಸರ ಉದ್ದೇಶ.