ಜಮ್ಮು-ಕಾಶ್ಮೀರದಲ್ಲಿ ನಮ್ಮ ಜನ ಬಡತನದತ್ತ ಸಾಗುತ್ತಿದ್ದಾರೆಬಿಜೆಪಿ ಮೇಲೆ ಹರಿಹಾಯ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ನಮ್ಮ ರಾಜ್ಯದಲ್ಲಿ ವಾಣಿಜ್ಯ ವ್ಯವಹಾರಗಳ ತೀವ್ರ ಕುಸಿತ ಎಂದ ಆಜಾದ್

ಜಮ್ಮು (ಡಿ. 25): ಕಳೆದ ಎರಡೂವರೆ ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ವ್ಯಾಪಾರ ಹಾಗೂ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೀವ್ರ ಕುಸಿತ ಕಂಡಿದ್ದು, ಇಲ್ಲಿನ ಜನರು ಬಡತನದತ್ತ ಸಾಗುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್(Congress) ನಾಯಕ ಗುಲಾಮ್ ನಬಿ ಆಜಾದ್ (Ghulam Nabi Azad) ಹೇಳಿದ್ದಾರೆ. ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಕೇಂದ್ರದ ಆಡಳಿತವನ್ನು ತೀಕ್ಷ್ಣ ಶಬ್ದಗಳಿಂದ ಟೀಕಿಸಿದ ಗುಲಾಂ ನಬಿ ಆಜಾದ್, ಪ್ರಸ್ತುತ ಇರುವ ಆಡಳಿತಕ್ಕಿಂತ ಜಮ್ಮು ಹಾಗೂ ಕಾಶ್ಮೀರದಲ್ಲಿ ಮಹಾರಾಜರ ಅವಧಿಯ ನಿರಂಕುಶ ಆಡಳಿತವೇ ಉತ್ತಮವಾಗಿತ್ತು ಎಂದು ಹೇಳಿದ್ದಾರೆ. ಅದರೊಂದಿಗೆ ಸಾಂಪ್ರದಾಯಿಕ ದ್ವೈವಾರ್ಷಿಕ "ದರ್ಬಾರ್" (Darbar)ಆಚರಣೆಯನ್ನು ನಿಲ್ಲಿಸಿರುವ ಸರ್ಕಾರದ ಕ್ರಮದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಬಾರ್ ಆಚರಣೆಯ ಅಡಿಯಲ್ಲಿ, ಸಿವಿಲ್ ಸೆಕ್ರೆಟರಿಯೇಟ್ ಮತ್ತು ಇತರ ಕಛೇರಿಗಳು ಬೇಸಿಗೆಯ ಆರು ತಿಂಗಳು ಶ್ರೀನಗರದಲ್ಲಿ (Srinagar) ಮತ್ತು ವರ್ಷದ ಉಳಿದ ಅವಧಿಯಲ್ಲಿ ಜಮ್ಮುವಿನಲ್ಲಿ (Jammu)ಕಾರ್ಯನಿರ್ವಹಿಸುತ್ತವೆ. ಇದನ್ನು 1872 ರಲ್ಲಿ ಮಹಾರಾಜ ಗುಲಾಬ್ ಸಿಂಗ್ (Gulab Singh) ಪ್ರಾರಂಭಿಸಿದರು. ಆದರೆ, ಕೇಂದ್ರಾಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Lieutenant Governor Manoj Sinha ) ಜೂನ್ 20 ರಂದು ದರ್ಬಾರ್ ಆಚರಣೆಯನ್ನು ಅಂತ್ಯ ಮಾಡಿದ್ದರು.

ನಾನು ಮೊದಲಿನಿಂದಲೂ ದರ್ಬಾರ್ ಪದ್ಧತಿಯ ಆಚರಣೆಯ ಪರವಾಗಿದ್ದೆ. ಕಾಶ್ಮೀರ ಹಾಗೂ ಜಮ್ಮುವಿನ ಜನರ ಸಾರ್ವಜನಿಕರ ಹಿತಾಸಕ್ತಿಯ ಆಧಾರದಲ್ಲಿ ಮಹಾರಾಜರು ನಮಗೆ ಮೂರು ವಿಚಾರಗಳನ್ನು ನೀಡಿದ್ದರು ಅದರಲ್ಲಿ ದರ್ಬಾರ್ ಆಚರಣೆಯೂ ಒಂದಾಗಿತ್ತು. ಅದರೊಂದಿಗೆ ಈ ಪ್ರದೇಶದಿಂದ ಹೊರಗಿನ ಜನರಿಂದ ಭೂಮಿ ಹಾಗೂ ಉದ್ಯೋಗದ ರಕ್ಷಣೆಯನ್ನೂ ಮಹಾರಾಜ ಹರಿಸಿಂಗ್ (Hari Singh) ಖಾತ್ರಿ ಪಡಿಸಿದ್ದರು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

Jammu and Kashmir Delimitation : ಕರಡು ಸಮಿತಿ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ, ಪ್ರತಿಭಟನೆಗೆ ರೆಡಿ!
ಇಂದು ಬಹಳ ವರ್ಷಗಳ ನಂತರ, ಸರ್ವಾಧಿಕಾರಿ ಎಂದು ಕರೆಸಲ್ಪಟ್ಟಿದ್ದ ಮಹಾರಾಜರು ಈಗಿನ ಸರ್ಕಾರಕ್ಕಿಂತ ಉತ್ತಮವಾಗಿದ್ದರು ಎಂದು ನಮಗನಿಸಿದೆ. ಮಹಾರಾಜರ ಕಾರ್ಯಗಳು ಇಲ್ಲಿನ ಜನರ ಪ್ರಗತಿಗಾಗಿ ಇರುತ್ತಿದ್ದವು. ಆದರೆ, ಈಗಿನ ಸರ್ಕಾರ ಮಹಾರಾಜರು ನಮಗೆ ನೀಡಿದ್ದ ಈ ಮೂರೂ ವಿಚಾರಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ದರ್ಬಾರ್ ಆಚರಣೆ, ಭೂಮಿಯ ರಕ್ಷಣೆ ಹಾಗೂ ಕೆಲಸ ಈ ಮೂರನ್ನೂ ಕಿತ್ತುಕೊಂಡಿದ್ದಾರೆ ಎಂದು ಹೇಳುವ ಮೂಲಕ 370ನೇ ವಿಧಿ ರದ್ದತಿಯ ಬಗ್ಗೆ ಪ್ರಸ್ತಾಪಿಸಿದರು.

Srinagar Terror Attack ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ, 12 ಮಂದಿಗೆ ಗಾಯ,ಇಬ್ಬರು ಹುತಾತ್ಮ, ಮೋದಿ ಸಂತಾಪ!
ಇಲ್ಲಿನ ಜನರು ವ್ಯಾಪಾರ ವಹಿವಾಟು, ಕೆಲಸಗಳಿಲ್ಲದೆ ಸಿಟ್ಟಿಗೆದ್ದಿದ್ದಾರೆ. ಪ್ರತಿ ವಸ್ತುವಿನ ಬೆಲೆಯೂ ಗಗನ ಮುಟ್ಟಿದೆ. ಇನ್ನು ಅಭಿವೃದ್ಧಿ ಕಾರ್ಯಗಳಂತೂ ಇದ್ದಲ್ಲೇ ಇವೆ. ನಗರ ಪ್ರದೇಶದಲ್ಲಿ ಖುಷಿಯ ವಾತಾವರಣ ಇರುತ್ತದೆ ಎಂದು ಅಂದುಕೊಂಡರೆ, ಅಲ್ಲೂ ಕೂಡ ಇದೇ ಕಥೆ. ಪ್ರತಿ ಮಳಿಗೆಯನ್ನು ನಾನು ಭೇಟಿ ಮಾಡಿದಾಗಲೂ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ ಕಳೆದ ಐದು ವರ್ಷಗಳಿಂದಲೂ ಇದೇ ಕಥೆ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿರುವುದಕ್ಕೆ ಖುಷಿ ವ್ಯಕ್ತಪಡಿಸಿದ ಗುಲಾಂ ನಬಿ ಆಜಾದ್, ಕಳೆದ ಎರಡು ವರ್ಷಗಳಿಂದ ಇಲ್ಲಿನ ರಾಜಕಾರಣಿಗಳು ಜನರೊಂದಿಗೆ ಸಂಪರ್ಕವನ್ನೇ ನಡೆಸಿರಲಿಲ್ಲ. ಈಗ ಸಾಧ್ಯವಾಗುತ್ತಿರುವುದಕ್ಕೆ ಖುಷಿ ಇದೆ ಎಂದರು.

ನನಗೆ ಜಮ್ಮು ಮತ್ತು ಕಾಶ್ಮೀರ ಬೇರೆ ಬೇರೆಯಲ್ಲ: ಜಮ್ಮು ಕಾಶ್ಮೀರದಲ್ಲಿ ಡಿಮಿಲಿಟೇಶನ್ ಕಮೀಷನ್ ತನ್ನ ಶಿಫಾರಸಿನಲ್ಲಿ ಮಾಡಿರುವ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಜಮ್ಮು ಮತ್ತು ಕಾಶ್ಮೀರ ಬೇರೆ ಬೇರೆಯಲ್ಲ. ಯಾವುದೋ ಒಂದು ಪ್ರದೇಶದ ಜನರ ಪರವಾಗಿ ನಾನು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಡಿಲಿಮಿಟೇಶನ್ ಸಮಿತಿ ತನ್ನ ಕರಡು ಶಿಫಾರಸಿನಲ್ಲಿ ಜಮ್ಮುವಿನಲ್ಲಿ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಕಾಶ್ಮೀರದಲ್ಲಿ 1 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಲು ಶಿಫಾರಸು ಮಾಡಿದೆ.