ಆಟೋ ರಿಕ್ಷಾ ಚಾಲಕನಾಗಿದ್ದವನು ಇದೀಗ ಪ್ರಸಿದ್ಧ ನಗರವೊಂದಕ್ಕೆ ಮೇಯರ್ ಆಗಿ ಆಯ್ಕೆಯಾಗಿದ್ದಾನೆ. ಮಹಾರಾಷ್ಟ್ರ ಪಿಂಪ್ರಿ ನಗರಕ್ಕೆ ಬಿಜೆಪಿಯಿಂದ ಮೇಯರ್ ಆಗಿ ಈ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ. 

ಪುಣೆ: ಒಂದು ಕಾಲದಲ್ಲಿ ಆಟೋ ರಿಕ್ಷಾ ಚಾಲಕ ರಾಗಿದ್ದ ರಾಹುಲ್ ಜಾಧವ್ ಎಂಬುವರು ಇದೀ ಗ ಉದ್ಯಮ ನಗರವೆಂದೇ ಖ್ಯಾತವಾದ ಪಿಂಪ್ರಿ ಚಿಂಚ್‌ವಾಡ್ ನಗರದ ಮೇಯರ್ ಆಗಿ ಆಯ್ಕೆ ಯಾಗಿದ್ದಾರೆ.

ನಿತೀನ್ ಕಾಲ್ಜೆ ಅವರು ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಜಾಧವ್ ಹೆಸರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿತು. 

ಆದರೆ, ಎನ್‌ಸಿಪಿಯೂ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಘೋಷಣೆ ಮಾಡಿದ, ಹಿನ್ನೆಲೆಯಲ್ಲಿ ಚುನಾವಣೆ ಏರ್ಪಟ್ಟಿತ್ತು. ಇದರಲ್ಲಿ ಜಾಧವ್ ಅವರು ಬಹುಮತ ಪಡೆಯುವ ಮೂಲಕ, ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ.