ಆಟೋದಲ್ಲಿ ಬಿಟ್ಟ ಒಡವೆಗಳನ್ನ ಕಮಿಷ್ ನರ್ ಕಛೇರಿಗೆ ನೀಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಂಗಳೂರು (ನ.24): ಆಟೋದಲ್ಲಿ ಬಿಟ್ಟ ಒಡವೆಗಳನ್ನ ಕಮಿಷ್ ನರ್ ಕಛೇರಿಗೆ ನೀಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸುಮಾರು 4 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನ ವಾಪಸ್ಸು ನೀಡಿ ಆಟೋ ಚಾಲಕ ಮಹ್ಮಮದ್ ಇಕ್ಬಾಲ್ ಪ್ರಾಮಾಣಿಕತೆ ಮೆರೆದಿದ್ದಾರೆ. ಕಳೆದ ಸೆ. 30 ರಂದು ಚೆನ್ನೈ ಮೂಲದ ಸುನಿಲ್ ಕಮಾರ್ ಕುಟುಂಬ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಇಕ್ಬಾಲ್ ಆಟೋದಲ್ಲಿ ಸುನಿಲ್ ಕುಮಾರ್ ಕುಟುಂಬ ಪ್ರಯಾಣ ಮಾಡಿದ್ದರು. ಆಗ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಆಟೋದಲ್ಲಿ ಮರೆತು ಹೋಗಿದ್ದರು. ಈ ಕುರಿತು ಜೀವನ ಭೀಮಾನಗರದಲ್ಲಿ ಪ್ರಕರಣ ದಾಖಲಾಗಿತ್ತು. ಮರುದಿನ ಇಕ್ಬಾಲ್ ಆಟೋ ಓಡಿಸುವಾಗಿ ಈ ಬ್ಯಾಗ್ ಗಮನಿಸಿದ್ದಾರೆ. ತಕ್ಷಣ ಬ್ಯಾಗ್'ಅನ್ನು ಕಮಿಷನರ್ ಕಛೇರಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಒಡವೆಗಳನ್ನ ಕಳೆದುಕೊಂಡವರಿಗೆ ಮಾಹಿತಿ ತಿಳಿಸಿ ಇಕ್ಬಾಲ್ ಸಮ್ಮುಖದಲ್ಲಿ ಹಣ ವಾಪಸ್ ನೀಡಿದ್ದಾರೆ.
