ಡೀಲರ್’ಗಳು ಬಿಎಸ್-3 ವಾಹನಗಳನ್ನು ಸದ್ಯಕ್ಕೆ ತಮ್ಮ ಸಂಬಂಧಿಕರಿಗೆ ಬೃಹತ್ ಪ್ರಮಾಣದಲ್ಲಿ ಮಾರಿದ್ದಾರೆ. ಆ ಬಳಿಕ ಅವರು ಗ್ರಾಹಕರಿಗೆ ಮಾರಬಹುದಾಗಿದೆ. ಆಗ ನೋಂದಣಿ ಸಮಸ್ಯೆಯಾಗುವುವುದಿಲ್ಲ, ಎಂದು ಪ್ರಾಧಿಕಾರವು ಹೇಳಿದೆ.

ನವದೆಹಲಿ (ಎ. 01): ಏ.01 ರಿಂದ ಬಿಎಸ್-3 ಮಾದರಿಯ ವಾಹನಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಡೀಲರ್’ಗಳು ‘ನಕಲಿ ಮಾರಾಟ’ದಂತಹ ವಾಮಮಾರ್ಗವನ್ನು ಬಳಸಿಕೊಳ್ಳುತ್ತಿದ್ದಾರೆಂದು ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿಕಾರ (EPCA)ಆರೋಪಿಸಿದೆ.

ಡೀಲರ್’ಗಳು ಬಿಎಸ್-3 ವಾಹನಗಳನ್ನು ಸದ್ಯಕ್ಕೆ ತಮ್ಮ ಸಂಬಂಧಿಕರಿಗೆ ಬೃಹತ್ ಪ್ರಮಾಣದಲ್ಲಿ ಮಾರಿದ್ದಾರೆ. ಆ ಬಳಿಕ ಅವರು ಗ್ರಾಹಕರಿಗೆ ಮಾರಬಹುದಾಗಿದೆ. ಆಗ ನೋಂದಣಿ ಸಮಸ್ಯೆಯಾಗುವುವುದಿಲ್ಲ, ಎಂದು ಪ್ರಾಧಿಕಾರವು ಹೇಳಿದೆ.

ಆದುದರಿಂದ, ತಮ್ಮ ಬಳಿ ದಾಸ್ತಾನಿದ್ದ ವಾಹನಗಳನ್ನು ಡೀಲರ್’ಗಳು ಏನು ಮಾಡಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಸುಪ್ರೀಂ ಕೋರ್ಟ್’ಗೆ ಸಲ್ಲಿಸಬೇಕಾಗಬಹುದೆಂದು, ಪ್ರಾಧಿಕಾರವು ಹೇಳಿದೆ.

ಸುಪ್ರೀಂ ಕೋರ್ಟ್ ಕಳೆದ ಮಾ.29ಕ್ಕೆ ಬಿಎಸ್-3 ವಾಹನಗಳನ್ನು ನಿಷೇಧಿಸಿದ್ದು, ವರದಿಗಳ ಪ್ರಕಾರ ದೇಶದಲ್ಲಿ 8.24 ಲಕ್ಷ ವಾಹನಗಳು ದಾಸ್ತಾನಿದ್ದುವು, ಅದರಲ್ಲಿ ಸಿಂಹಪಾಲು ಅಂದರೆ ಸುಮಾರು 6 ಲಕ್ಷ ಸಂಖ್ಯೆಯ ದ್ವಿಚಕ್ರವಾಹನಗಳಿದ್ದುವು.

(ಸಾಂದರ್ಭಿಕ ಚಿತ್ರ)