ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದಲ್ಲಿರುವ ಪ್ರಸಿದ್ಧ ಕೋಟಿ ಶಿವಲಿಂಗ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಆಡಳಿತಾಧಿಕಾರಿ ಕುಮಾರಿ (50) ಎಂಬುವವರ ಮೇಲೆ ಹಲ್ಲೆ ನಡೆದಿದೆ. 

ಕೋಲಾರ(ಅ.17): ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲೇ ಕೊಲೆ ಯತ್ನ ನಡೆದಿದ್ದು, ಕ್ಷೇತ್ರದ ಆಡಳಿತಾಧಿಕಾರಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ. ಈ ದೃಶ್ಯಗಳು ಕ್ಯಾಮೆರದಲ್ಲಿ ಸೆರೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದಲ್ಲಿರುವ ಪ್ರಸಿದ್ಧ ಕೋಟಿ ಶಿವಲಿಂಗ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಆಡಳಿತಾಧಿಕಾರಿ ಕುಮಾರಿ (50) ಎಂಬುವವರ ಮೇಲೆ ಹಲ್ಲೆ ನಡೆದಿದೆ. 

ಭಾನುವಾರ ಕಮ್ಮಸಂದ್ರ ಗ್ರಾಮದ ಸಂತೋಷ್ ಮತ್ತು ಸ್ನೇಹಿತರಿಂದ ಹಲ್ಲೆ ನಡೆಸಲಾಗಿದ್ದು, ಲಾಂಗ್​ನಿಂದ 12 ಬಾರಿ ಹಲ್ಲೆ ಮಾಡಲಾಗಿದ್ದು, ಕುಮಾರಿ ಕುತ್ತಿಗೆಯನ್ನು ಕಡಿದು ಹಾಕುವ ಯತ್ನ ನಡೆದಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕುಮಾರಿ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.