ಕೆಂಪೇಗೌಡ ರಸ್ತೆಯಿಂದ ನಿನ್ನೆ ನಾಪತ್ತೆಯಾಗಿದ್ದ ಎಟಿಎಂ ಘಟಕಗಳಗೆ ಹಣ ತುಂಬುವ ವಾಹನ ವಸಂತನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು ಬಳಿ ಪತ್ತೆಯಾಗಿದೆ.

ಬೆಂಗಳೂರು (ನ.24): ಕೆಂಪೇಗೌಡ ರಸ್ತೆಯಿಂದ ನಿನ್ನೆ ನಾಪತ್ತೆಯಾಗಿದ್ದ ಎಟಿಎಂ ಘಟಕಗಳಗೆ ಹಣ ತುಂಬುವ ವಾಹನ ವಸಂತನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು ಬಳಿ ಪತ್ತೆಯಾಗಿದೆ.

ಎಟಿಎಂ ಘಟಕಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗುತ್ತಿದ್ದ ₹ 1.37 ಕೋಟಿ ನಗದು ಇದ್ದ ವಾಹನದ ಜತೆಗೆ ಚಾಲಕ ಡಾಮಿನಿಕ್‌ ಜಾಯ್‌ ಪರಾರಿಯಾಗಿದ್ದ. 44 ಲಕ್ಷ ನಗದು ಮತ್ತು ಬಂದೂಕನ್ನು ವಾಹನದಲ್ಲೇ ಬಿಟ್ಟು ಉಳಿದ ₹ 93 ಲಕ್ಷ ಹಣದೊಂದಿಗೆ ಡಾಮಿನಿಕ್‌ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಸೆಕ್ಯುರ್ ಟ್ರಾನ್ಸಿಟ್’ ಏಜೆನ್ಸಿಯ ಚಾಲಕನಾಗಿದ್ದ ಡಾಮಿನಿಕ್‌ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.