ಈ ಎಟಿಎಂನಲ್ಲಿ ಒಂದು ಗ್ರಾಮ್'ನಿಂದ 20 ಗ್ರಾಂವರೆಗೆ ಚಿನ್ನದ ನಾಣ್ಯಗಳು ಲಭ್ಯವಿರುತ್ತವೆ.

ಬೆಂಗಳೂರು(ಅ. 26): ಎಟಿಎಂನಲ್ಲಿ ನಗದು ಹಣ ಸಿಗುವುದನ್ನು ನೋಡಿದ್ದೇವೆ. ಆದರೆ, ಉದ್ಯಾನನಗರಿಯಲ್ಲಿ ಚಿನ್ನ ನೀಡುವ ಎಟಿಎಂವೊಂದು ಜನರ ಗಮನ ಸೆಳೆಯುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನದ ಖರೀದಿಸಬಯಸುವ ಜನರಿಗೆ ನೆರವಾಗಲು ಈ ಎಟಿಎಂ ಸ್ಥಾಪನೆ ಮಾಡಲಾಗಿದೆ. ಈ ಎಟಿಎಂನಲ್ಲಿ ನೀವು ಸುಲಭವಾಗಿ ಚಿನ್ನ ಖರೀದಿಸಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು. ಅಥವಾ ಕ್ಯಾಷ್ ಮೂಲಕವೂ ಪಾವತಿ ಮಾಡಬಹುದು. ಈ ಎಟಿಎಂನಲ್ಲಿ ಒಂದು ಗ್ರಾಮ್'ನಿಂದ 20 ಗ್ರಾಂವರೆಗೆ ಚಿನ್ನದ ನಾಣ್ಯಗಳು ಲಭ್ಯವಿರುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಣಮಟ್ಟ ಸರಿ ಇರುತ್ತಾ?
ಇಲ್ಲಿ ಸಿಗುವ ಚಿನ್ನದ ಗುಣಮಟ್ಟ ಖಾತ್ರಿಪಡಿಸಲು ಎಟಿಎಂ ಮೂಲಕವೇ ಪ್ರಮಾಣಪತ್ರ ನೀಡಲಾಗುತ್ತದೆ. ನಾವು ಖರೀದಿಸುವ ಚಿನ್ನಕ್ಕೆ ಆಗಿನ ಮಾರುಕಟ್ಟೆ ದರ ನಿಗದಿಯಾಗಿರುತ್ತದೆ.

ಬ್ಲೂಸ್ಟೋನ್ ಎಂಬ ಆನ್'ಲೈನ್ ಜಿವೆಲರಿ ಸಂಸ್ಥೆಯು ಬೆಂಗಳೂರಿನಲ್ಲಿ ಇಂಥದ್ದೊಂದು ಪ್ರಯೋಗ ಮಾಡಿದೆ. ಗ್ರಾಹಕರು ಈಗಾಗಲೇ ಈ ಎಟಿಎಂ ಕಡೆ ಹರಿದುಬರುತ್ತಿರುವುದನ್ನು ಕಂಡು ಸಮಾಧಾನಗೊಂಡಿರುವ ಸಂಸ್ಥೆಯು ಬೇರೆ ಬೇರೆ ನಗರಗಳಲ್ಲಿ ಇಂಥ ಎಟಿಎಂಗಳನ್ನು ಸ್ಥಾಪಿಸಲು ಯೋಜಿಸಿದೆ.