ವಾಷಿಂಗ್ಟನ್ :  ಸಂಭೋಗ ನಡೆಸಿದಾಗ್ಯೂ, ಮಕ್ಕಳಾಗದಂತೆ ತಡೆ ಯಲು ಮತ್ತು ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳ ತಡೆಗಾಗಿ ಕಾಂಡೋಮ್ ಬಳಸೋದು ತಿಳಿಯದೇ ಇರುವ ಸಂಗತಿಯೇನಲ್ಲ. ಆದರೆ, ಕಾಂಡೋಮ್‌ಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಕೆಲವರಿಗೆ ಮಾಹಿತಿ ಇರಲ್ಲ ಎಂದರೆ ಆಶ್ಚರ್ಯಪಡಬೇಕಾದದ್ದೇನೂ ಇಲ್ಲ. 

ಆದ್ರೆ,  ಅಮೆರಿಕದಂಥ ಸಾಕಷ್ಟು ಸಾಕ್ಷರತೆ ಇರುವ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದ ನಗರದ ಜನರು ಬಳಸಿದ ಕಾಂಡೋಮ್‌ಗಳನ್ನೇ ತೊಳೆದು ಮತ್ತೆ ಮತ್ತೆ ಬಳಸುತ್ತಿದ್ದಾರಂತೆ. ಹೀಗಾಗಿ, ಅಲ್ಲಿನ ಬಳಸಿದ  ಕಾಂಡೋಮ್‌ಗಳನ್ನೇ ಪುನಃ ಬಳಸಬೇಡಿ ಎಂದು ತಿಳಿ ಹೇಳುವ ಅನಿವಾರ್ಯತೆ ವೈದ್ಯರಿಗೆ ಎದುರಾಗಿದೆ.