ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾತನಾಡಲು ಹೋಗಿ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ. ತನ್ನ ನರಿ ಬುದ್ದಿಯನ್ನು ತೋರಿಸಲು ಹೋಗಿ ಜಾಗತಿಕವಾಗಿ ತನ್ನ ಅಸಲಿಯತ್ತನ್ನು ಬಯಲು ಮಾಡಿಕೊಂಡಿದೆ.
ನವದೆಹಲಿ (ಸೆ.24): ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾತನಾಡಲು ಹೋಗಿ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ. ತನ್ನ ನರಿ ಬುದ್ದಿಯನ್ನು ತೋರಿಸಲು ಹೋಗಿ ಜಾಗತಿಕವಾಗಿ ತನ್ನ ಅಸಲಿಯತ್ತನ್ನು ಬಯಲು ಮಾಡಿಕೊಂಡಿದೆ.
ಪ್ಯಾಲೇಸ್ತಿನ್ ದಾಳಿ ಸಂತ್ರಸ್ತೆ ಫೋಟೋ ತೋರಿಸಿ ಕಾಶ್ಮೀರದ ದಾಳಿಯ ಸಂತ್ರಸ್ತೆ ಎಂದು ವಿಶ್ವಸಂಸ್ಥೆಯ ಪಾಕಿಸ್ತಾನ ರಾಯಭಾರಿ ಮಲೀಹಾ ಲೋಧಿಯಿಂದ ದಾರಿ ತಪ್ಪಿಸುವ ಯತ್ನ ಮಾಡಿದರು. ಭೀಕರವಾಗಿ ಗಾಯಗೊಂಡಿರುವ 17 ವರ್ಷದ ಬಾಲಕಿಯ ಫೋಟೋವನ್ನು ತೋರಿಸಿ ಇದು ಭಾರತದ ಕ್ರೌರ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ವಾಸ್ತವವಾಗಿ ಆ ಫೋಟೋ 17 ವರ್ಷದ ಬಾಲಕಿ ರೌವ್ಯಾ ಅಬು ಜೋಮಾ ಎಂಬುವವರದ್ದಾಗಿದ್ದು ಇಸ್ರೇಲಿ ವಾಯುದಾಳಿಯಲ್ಲಿ ಗಾಯಗೊಂಡಿದ್ದರು. ಖ್ಯಾತ ಫೋಟೋಗ್ರಾಫರ್ ಹೇಡಿ ಲೆವಿನೇ 2014 ರಲ್ಲಿ ತೆಗೆದಿದ್ದು. ಇದು ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಬಂದಿದೆ. ಏನೋ ಮಾಡಲು ಹೋಗಿ ಪಾಕ್'ಗೆ ಭಾರೀ ಮುಖಭಂಗವಾದಂತಾಗಿದೆ.
