ರಷ್ಯಾ ವಿಮಾನದಲ್ಲಿ ಬೆಂಕಿ: 41 ಪ್ರಯಾಣಿಕರು ಸಾವು| ಅನೇಕರಿಗೆ ಗಂಭೀರ ಗಾಯ
ಮಾಸ್ಕೋ[ಮೇ.06]: ರಷ್ಯಾದ ಪ್ರಯಾಣಿಕ ವಿಮಾನವೊಂದು ಹಾರಾಟ ಕೈಗೊಂಡಿರುವಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಮಾಸ್ಕೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯಲ್ಲಿ 41 ಮಂದಿ ಸಾವಿಗೀಡಾಗಿದ್ದಾರೆ.
78 ಮಂದಿ ಪ್ರಯಾಣಿಕರಿದ್ದ ರಷ್ಯಾದ ಸುಖೋಯ್ ಸೂಪರ್ ಜೆಟ್ ವಿಮಾನ ಮಾಸ್ಕೋದ ಶೆರ್ಮೆಟಿವೊ ವಿಮಾನ ನಿಲ್ದಾಣದಿಂದ ಭಾನುವಾರ ಹಾರಾಟ ಕೈಗೊಂಡ ಕೆಲವೇ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ತುರ್ತು ಭೂಸ್ಪರ್ಶ ಮಾಡಿದೆ. ಕೂಡಲೇ ಹಲವು ಮಂದಿ ಪ್ರಯಾಣಿಕರು ತುರ್ತು ದ್ವಾರದ ಮೂಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಅಷ್ಟರೊಳಗಾಗಲೇ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿದ್ದು, ಗಗನಸಖಿ ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ವಿಮಾನದಲ್ಲಿ ಇಲೆಕ್ಟ್ರಿಕಲ್ ಉಪಕರಣಗಳಲ್ಲಿ ಉಂಟಾದ ದೋಷದಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ.
