ಸವಾಯಿ ಮಧೋಪುರ್‌ನಿಂದ ಲಾಲ್‌'ಸೊಟ್‌'ಗೆ ಪ್ರಯಾಣಿಸುತ್ತಿದ್ದ ಬಸ್, ಸೂರ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 100 ಅಡಿ ಎತ್ತರದ ಸೇತುವೆಯಿಂದ ನದಿಗೆ ಬಿದ್ದಿದೆ. ನಿದ್ದೆಯ ಮಂಪರಿನಲ್ಲಿದ್ದ ಚಾಲಕನಿಗೆ ಬಸ್ ಮೇಲೆ ನಿಯಂತ್ರಣ ತಪ್ಪಿ ಅದು ಸೇತುವೆಯ ಗೋಡೆಗೆ ಬಡಿದು ಬಳಿಕ ಕೆಳಕ್ಕೆ ಉರುಳಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಜೈಪುರ(ಡಿ.23): ಬನಾಸ್ ನದಿಗೆ ಖಾಸಗಿ ಬಸ್ ಒಂದು ಬಿದ್ದು 32 ಮಂದಿ ಮೃತಪಟ್ಟಿದ್ದು, ಏಳಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಮಧೋಪುರ್ ಜಿಲ್ಲೆಯಲ್ಲಿ ನಡೆದಿದೆ.
ಸವಾಯಿ ಮಧೋಪುರ್ನಿಂದ ಲಾಲ್'ಸೊಟ್'ಗೆ ಪ್ರಯಾಣಿಸುತ್ತಿದ್ದ ಬಸ್, ಸೂರ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 100 ಅಡಿ ಎತ್ತರದ ಸೇತುವೆಯಿಂದ ನದಿಗೆ ಬಿದ್ದಿದೆ. ನಿದ್ದೆಯ ಮಂಪರಿನಲ್ಲಿದ್ದ ಚಾಲಕನಿಗೆ ಬಸ್ ಮೇಲೆ ನಿಯಂತ್ರಣ ತಪ್ಪಿ ಅದು ಸೇತುವೆಯ ಗೋಡೆಗೆ ಬಡಿದು ಬಳಿಕ ಕೆಳಕ್ಕೆ ಉರುಳಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ‘ರಕ್ಷಣಾ ಕಾರ್ಯಾಚರಣೆ ಸೇರಿದಂತೆ, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯಗಳನ್ನು ಒದಗಿಸುವ ಜೊತೆಗೆ, ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರ ತೀವ್ರ ನಿಗಾವಿರಿಸಿದೆ’ ಎಂದು ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿದೆ.
