ಟೋರಂಟೋದಲ್ಲಿರುವ ಭಾರತೀಯ ರೆಸ್ಟೋರೆಂಟ್’ನಲ್ಲಿ ಸ್ಫೋಟ; ಮೂವರ ಸ್ಥಿತಿ ಗಂಭೀರ

news | Friday, May 25th, 2018
Suvarna Web Desk
Highlights

ಮಿಸಿಸೌಗಾದಲ್ಲಿರುವ ಬಾಂಬೆ ಬೇಲ್ ರೆಸ್ಟೋರೆಂಟ್’ನಲ್ಲಿ ನಿನ್ನೆ ರಾತ್ರಿ ಸ್ಫೋಟ ಸಂಭವಿಸಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ.

ಟೋರೊಂಟೋ (ಮೇ. 25): ಮಿಸಿಸೌಗಾದಲ್ಲಿರುವ ಬಾಂಬೆ ಬೇಲ್ ರೆಸ್ಟೋರೆಂಟ್’ನಲ್ಲಿ ನಿನ್ನೆ ರಾತ್ರಿ ಸ್ಫೋಟ ಸಂಭವಿಸಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ.  ನಿನ್ನೆ ರಾತ್ರಿ 10. 30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ.

ಸ್ಫೋಟ ಸಂಭವಿಸಿದ ಕೂಡಲೇ ಅಲ್ಲಿದ್ದವರನ್ನು ಬೇರೆ ಕಡೆ ಸ್ಥಳಾಂತರಿಸಲಾಯಿತು. ರೆಸ್ಟೋರೆಂಟ್ ಒಳಗೆ ಎಷ್ಟು ಮಂದಿ ಸಿಲುಕಿರಬಹುದೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲವೆಂದು ಪೊಲೀಸರು ಹೇಳಿದ್ದಾರೆ.  ಇಬ್ಬರು ಶಂಕಿತಾಸ್ಪದ ವ್ಯಕ್ತಿಗಳು ರೆಸ್ಟೋರೆಂಟ್ ಒಳಗೆ ಸ್ಪೋಟಕ ವಸ್ತುಗಳನ್ನು ಇಟ್ಟಿದ್ದಾರೆ. ಸ್ಪೋಟ ಸಂಭವಿಸಿದ ಕೂಡಲೇ ಇವರಿಬ್ಬರೂ ಓಡಿ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

Comments 0
Add Comment

    Related Posts