ಮಣಿದ ಸರ್ಕಾರ: 1 ಲಕ್ಷದವರೆಗಿನ ಚಾಲ್ತಿ ಸಾಲವೂ ಮನ್ನಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jul 2018, 6:17 PM IST
At last Karnataka Government waives off current farmers loan up to 1 lakh
Highlights

ಅಂತೂ ಇಂತು ವಿಪಕ್ಷಗಳು , ರೈತರು ಮತ್ತು ಮಾಧ್ಯಮದ ಒತ್ತಡಕ್ಕೆ ಮಣಿದ ಸಿಎಂ ಕುಮಾರಸ್ವಾಮಿ ಸಹಕಾರಿ ಸಂಘಗಳಲ್ಲಿನ 1 ಲಕ್ಷದ ವರೆಗಿನ ಚಾಲ್ತಿ ಸಾಲ ಮನ್ನಾ ಮಾಡಿದ್ದಾರೆ.ಬಜೆಟ್ ಅಧಿವೇಶನದ ಚರ್ಚೆಯ ವೇಳೆ ಅಂತಿಮ ಘೋಷಣೆ ಮಾಡಿದ್ದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. 

ಬೆಂಗಳೂರು[ಜು.12]  ಅಂತೂ ಇಂತು ವಿಪಕ್ಷಗಳು , ರೈತರು ಮತ್ತು ಮಾಧ್ಯಮದ ಒತ್ತಡಕ್ಕೆ ಮಣಿದ ಸಿಎಂ ಕುಮಾರಸ್ವಾಮಿ ಸಹಕಾರಿ ಸಂಘಗಳಲ್ಲಿನ 1 ಲಕ್ಷದ ವರೆಗಿನ ಚಾಲ್ತಿ ಸಾಲ ಮನ್ನಾ ಮಾಡಿದ್ದಾರೆ.ಬಜೆಟ್ ಅಧಿವೇಶನದ ಚರ್ಚೆಯ ವೇಳೆ ಅಂತಿಮ ಘೋಷಣೆ ಮಾಡಿದ್ದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. 

ಸಾಲ ಮನ್ನಾದಿಂದ ಬೆಳಗಾವಿ ವಿಭಾಗಕ್ಕೆ 9501 ಕೋಟಿ ಕಲ್ಬುರ್ಗಿ 5563 ಕೋಟಿ ಮೈಸೂರು ವಿಭಾಗಕ್ಕೆ 6760  ಕೋಟಿ ಬೆಂಗಳೂರು- ವಿಭಾಗಕ್ಕೆ 6300 ಕೋಟಿ ಸೇರಿ ಒಟ್ಟು 21,000   ಕೋಟಿ ರೂ ಅನುಕೂಲವಾಗುತ್ತದೆ ಎಂದರು.

ಚಾಲ್ತಿ ಸಾಲ ಮನ್ನಾಕ್ಕೆ ಎಷ್ಟು ಬೇಕು? ಹಳೆಯ ಸುಸ್ತಿ ಸಾಲ ಮನ್ನಾಕ್ಕೆ ತೆಗೆದಿರಿಸಿದ್ದಕ್ಕಿಂತ 10,734 ಕೋಟಿ ರೂ.ಹೆಚ್ಚುವರಿಯಾಗಿ ಬೇಕಾಗುತ್ತದೆ. ಹಿಂದೆ ಹೇಳಿದ್ದ 25 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ವಿಚಾರ ಕೈಬಿಟ್ಟಿದ್ದು ಆ ಹಣವನ್ನು ಚಾಲ್ತಿ ಸಾಲ ಮನ್ನಾ ಮಾಡಿಕೊಳ್ಳಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಜತೆಗೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ಸಾಲದ ಕುರಿತಾಗಿ ಬಿಜೆಪಿ ನಾಐಕರಿಗೆ ಬಿಸಿ ಮುಟ್ಟಿಸಿದರು.

ಅನ್ನಭಾಗ್ಯ ಅಕ್ಕಿ ಕಡಿತ ಇಲ್ಲ:   ಬಜೆಟ್ ನಲ್ಲಿ ಅನ್ನಭಾಗ್ಯ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಇನ್ನು ಮುಂದೆ ಮೊದಲಿನಂತೆ ವ್ಯಕ್ತಿಗೆ 7 ಕೆಜಿ ಅಕ್ಕಿ ನೀಡಲಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲ ಬಾಕಿ 10125 ಕೋಟಿ ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ 10723 ಕೋಟಿ ಸಾಲ ಬಾಕಿ ಇದೆ. ಈಗ 22 ಲಕ್ಷ ಜನರ 25,000 ರೂ. ವರೆಗಿನ ಸಾಲ ಮನ್ನಾ ಮಾಡಲು ಮುಂದಾದರೂ ಸರ್ಕಾರಕ್ಕೆ 5000 ಕೋಟಿ ರೂ ಹೆಚ್ಚಿನ ಹೊರೆಯಾಗುತ್ತದೆ. ಸಾಲ ಮನ್ನಾದಿಂದ  ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಅನುಕೂವಾಗಲಿದೆ ಎಂದು ತಿಳಿಸಿದರು.

ಸಾಲ ಮನ್ನಾ: ಜೆಡಿಎಸ್ ಪ್ರಣಾಳಿಕೆಯಿಂದ ರೈತ ಹೋರಾಟದವರೆಗೆ

ಸಾಲ ಮನ್ನಾದ ಹಣವನ್ನು ನಾಲ್ಕು ಕಂತುಗಳಲ್ಲಿ ಸರ್ಕಾರ ಮರುಪಾವತಿ ಮಾಡಲು ಬ್ಯಾಂಕ್ ಗಳ ಆಡಳಿತ ಮಂಡಳಿಗಳನ್ನು ಒಪ್ಪಿಸಿದ್ದೇನೆ‌.ಅವರು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡುತ್ತಾರೆ. 

ನಾನು 34 ಸಾವಿರ ಕೋಟಿ ಸಾಲ ಮನ್ನಾ ಘೋಷಣೆ ಮಾಡಿ ಮಾತಿಗೆ ತಪ್ಪಿದ್ರೆ ಜನ  ಸುಮ್ಮನೆ ಇರುವುದಿಲ್ಲ. ಸಾಲ ಮನ್ನಾ ವಿಷಯದಲ್ಲಿ ಸಹಕಾರ ನೀಡಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪ್ರಮುಖರನ್ನು ಅಭಿನಂದಿಸುತ್ತೇನೆ.ಅವರೊಂದಿಗೆ ಚರ್ಚಿಸಿದ ನಂತರವೇ ಈ ಸಾಹಸಕ್ಕೆ ಇಳಿದಿದ್ದೇನೆ.ಅವರ ಸಹಕಾರದೊಂದಿಗೇ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

loader