ಇದೊಂದು ಆಘಾತಕಾರಿ ಸುದ್ದಿ, ಆದರೆ ಇಂದಿನ ಧಾರ್ಮಿಕ ವ್ಯಥೆ ಎಂದರೂ ತಪ್ಪಲ್ಲ. ಆದರೆ ಧಾರ್ಮಿಕ ಶಾಲೆಗಳ ಕುರಿತು ಅಲ್ಲಿನ ಮಕ್ಕಳ ಪರಿಸ್ಥಿತಿ ಕುರಿತು ಇದೊಂದು ಎಚ್ಚರಿಕೆಯನ್ನು ನೀಡಬಲ್ಲದು.

ಬುದ್ಧಗಯಾ(ಆ.31) ಮಕ್ಕಳನ್ನು ಬೆತ್ತಲೆಯಾಗಿ ನೃತ್ಯ ಮಾಡಲು ಪ್ರೇರೇಪಿಸುತ್ತಿದ್ದ, ಕೆಲವೊಂದು ಸಂದರ್ಭದಲ್ಲಿ ಅವರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ ಕಪಟ ಸನ್ಯಾಸಿಯೊಬ್ಬನನ್ನು ಬಂಧಿಸಲಾಗಿದೆ. ಬಾಂಗ್ಲಾದೇಶದಿಂದ ವಲಸೆ ಬಂದಿದ್ದ ಸಂಘಪ್ರಿಯೆ ಸುಜೋಯ್ ಎಂಬಾತನನ್ನು ಬಂಧಿಸಿದ್ದು ಅನೇಕ ಆತಂಕಕಾರಿ ಮಾಹಿತಿಗಳು ಹೊರಬಂದಿವೆ.

Add Asianetnews Kannada as a Preferred SourcegooglePreferred

ವಿಶೇಷ ತನಿಖಾ ದಳದ ಅಧಿಕಾರಿಗಳು ಪ್ರಜ್ಞಾ ಜ್ಯೋತಿ ಶಾಲೆ ಮತ್ತು ಮೇಡಿಟೇಶನ್ ಸೆಂಟರ್ ನ ಗುರು ಎಂದು ಕರೆಸುಕೊಂಡಿದ್ದ ಸಂಘಪ್ರಿಯೆ ಸುಜೋಯ್ ನನ್ನು ಬಂಧಿಸಿದ್ದಾರೆ.

ನೀರು ಮತ್ತು ಆಹಾರ ನೀಡದೆ ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಲಾಗುತ್ತಿತ್ತು. ರಾತ್ರಿ ವೇಳೆ ಬೆತ್ತಲೆಯಾಗಿ ನೃತ್ಯ ಮಾಡಲು ೧೫ ವರ್ಷದ ಮಕ್ಕಳಿಗೆ ಒತ್ತಡ ಹೇರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬುದ್ಧ ಗಯಾದ ಈ ಶಾಲೆಯಿಂ14 ಮಕ್ಕಳ ರಕ್ಷಣೆ ಮಾಡಲಾಗಿದ್ದು ಬಂಧಿತ ಗುರುವಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.