ಗೋವಾದಲ್ಲಿ ಈ ಬಾರಿ ದಾಖಲೆ ಶೇ.83 ರಷ್ಟು ಮತದಾನವಾದರೆ ಪಂಜಾಬ್'ನಲ್ಲಿ ಶೇ.75 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.8 ರಷ್ಟು ಕಡಿಮೆಯಾಗಿದೆ.

ಚಂಡೀಘಢ / ಪಣಜಿ(ಫೆ.04): ಇಂದು ಪಂಜಾಬ್ ಹಾಗೂ ಗೋವಾದ ಎಲ್ಲ ಕ್ಷೇತ್ರಗಳಿಗೂ ವಿಧಾನಸಭಾ ಚುನಾವಣೆ ನಡೆದಿದ್ದು, ಪಂಜಾಬ್'ನಲ್ಲಿ ಶೇ.75 ಹಾಗೂ ಗೋವಾದಲ್ಲಿ ದಾಖಲೆ ಶೇ. 83 ಮತದಾನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋವಾದಲ್ಲಿ 40 ಕ್ಷೇತ್ರಗಳಿಗೆ ಮತ್ತು ಪಂಜಾಬ್'ನಲ್ಲಿ 117 ಕ್ಷೇತ್ರಗಳಲ್ಲಿ ಮತದಾನವಾಗಿದೆ. ಗೋವಾದಲ್ಲಿ ಈ ಬಾರಿ ದಾಖಲೆ ಶೇ.83 ರಷ್ಟು ಮತದಾನವಾದರೆ ಪಂಜಾಬ್'ನಲ್ಲಿ ಶೇ.75 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.3 ರಷ್ಟು ಕಡಿಮೆಯಾಗಿದೆ. ಸಿಖ್ಖರ ನಾಡಿನಲ್ಲಿ ಅರವಿಂದ್ ಕೇಜ್ರೀವಾಲ್'ರ ಅಮ್ ಆದ್ಮಿ, ಅಕಾಲಿ ದಳ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ನೇರ ಹಣಾಹಣಿ ನಡೆದರೆ ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.