ನವದೆಹಲಿ (ಫೆ.04): ಗೋವಾ ಮತ್ತು ಪಂಜಾಬ್ ನಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಗೋವಾದಲ್ಲಿ ಶೇ. 83 ರಷ್ಟು ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದರೆ ಪಂಜಾಬ್ ನಲ್ಲಿ ಶೇ. 70 ರಷ್ಟು ಮತದಾನವಾಗಿದೆ.
ನವದೆಹಲಿ (ಫೆ.04): ಗೋವಾ ಮತ್ತು ಪಂಜಾಬ್ ನಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಗೋವಾದಲ್ಲಿ ಶೇ. 83 ರಷ್ಟು ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದರೆ ಪಂಜಾಬ್ ನಲ್ಲಿ ಶೇ. 70 ರಷ್ಟು ಮತದಾನವಾಗಿದೆ.
ಮತದಾನ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡ ಅಧಿಕಾರಿಗಳಿಗೆ ಚುನಾವಣಾ ಆಯೋಗ ಕೃತಜ್ಞತೆ ಸಲ್ಲಿಸಿದೆ.
ಈ ಬಾರಿ ಗೋವಾದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದೆ ಎನ್ನಲಾಗಿದೆ. ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್, ಆಪ್ ಮತ್ತು ಎಂಜಿಪಿ ಮೈತ್ರಿಕೂಟದ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದೆ ಎನ್ನಲಾಗಿದೆ. ಕೆಲಸಮಯ ಇವಿಎಂ ಮಷಿನ್ ಕೈಕೊಟ್ಟಿದ್ದು ಬಿಟ್ಟರೆ ಅಹಿತಕರ ಘಟನೆ ಏನೂ ಸಂಭವಿಸದೇ ಸುಸೂತ್ರವಾಗಿ ಮತದಾನ ನಡೆದಿದೆ.
ಪಂಜಾಬ್ ನಲ್ಲಿ ಶೇ. 70 ರಷ್ಟು ಮತದಾನ ದಾಖಲಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣಾ ಮತದಾನಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.
ಸುಮಾರು 13.34 ಕೋಟಿ ಮೊತ್ತದ 12.43 ಲಕ್ಷ ಲೀಟರ್ ನಷ್ಟು ಮದ್ಯ, 58.08 ಕೋಟಿ ನಗದು, 2598 ಕೆಜಿ ಡ್ರಗ್ಸ್, 18.26 ಕೋಟಿ ಮೊತ್ತದ ನಾರ್ಕೋಟಿಕ್ಸ್ ನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.