Asianet Suvarna News

‘ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು 100 % ಖಚಿತ’

ಲೋಕಸಭಾ ಚುನಾವನೆ ಮುಕ್ತಾಯವಾದ ಬೆನ್ನಲ್ಲೇ ವಿಧಾನಸಭಾ ಉಪ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ನಾಯಕರ ಗೆಲುವಿನ ಭರವಸೆಯೂ ಕೂಡ ಹೆಚ್ಚುತ್ತಲಿದೆ.

Assembly By Election BJP Will Win In Kundgol Says Katta subramanya Naidu
Author
Bengaluru, First Published May 11, 2019, 2:17 PM IST
  • Facebook
  • Twitter
  • Whatsapp

ಹುಬ್ಬಳ್ಳಿ :  ರಾಜ್ಯ ವಿಧಾನ ಸಭಾ ಚುನಾವಣಾ ಕಣ ರಂಗೇರುತ್ತಿದ್ದು, ವಿವಿಧ ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಚಿಂಚೋಳಿ ಕುಂದಗೋಳದಲ್ಲಿ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಮತಯಾಚಿಸುತ್ತಿದ್ದಾರೆ. 

ಇತ್ತ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. 

ಡಿ.ಕೆ ಶಿವಕುಮಾರ್ ದೇವಮಾನವನಲ್ಲ, ನಮ್ಮ ಹಾಗೆ ಮನುಷ್ಯ. ನಮ್ಮ ಪಕ್ಷದಲ್ಲಿಯೂ ಕೂಡ ಸಮರ್ಥ ನಾಯಕರಿದ್ದಾರೆ ಎಂದು ಕಿಡಿಕಾರಿದರು. 

‘23ಕ್ಕೆ ರಾಜೀನಾಮೆ ನೀಡಲಿದ್ದಾರೆ ಕೈ ಶಾಸಕ’

ಡಿಕೆಶಿ ಬಂದಿದ್ದಾರೆಂದು ನಾವು ಹೆದರಿಲ್ಲ. ನಮ್ಮಲ್ಲಿಯೂ ಅವರಗಿಂತ ಸಮರ್ಥ ನಾಯಕರಿದ್ದಾರೆ. ಅವರನ್ನು ಸರಿಗಟ್ಟುವ ಮುಖಂಡರಿದ್ದಾರೆ. ಮುಂಬೈ ಕರ್ನಾಟಕದಲ್ಲಿ  ನಾಯಕರ ಕೊರತೆ ಇಲ್ಲ. ಅವರಷ್ಟೇ ಶಕ್ತಿ, ಯುಕ್ತಿ ಇರುವವರು ಈ ಭಾಗದಲ್ಲಿ ಇದ್ದಾರೆ ಎಂದರು.

ಈಗಾಗಲೇ ಕುಂದಗೋಳ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ನವರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮೊದಲ ಸುತ್ತಿನ ಮತಯಾಚನೆ ಮುಂದುವರಿಸಿದ್ದಾರೆ. ಈ ಕ್ಷೇತ್ರದಲ್ಲಿ 100ಕ್ಕೆ ನೂರರಷ್ಟು ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಕಟ್ಟಾ ಸುಮ್ರಹ್ಮಣ್ಯ ನಾಯ್ಡು ಭರವಸೆ ವ್ಯಕ್ತಪಡಿಸಿದರು.

Follow Us:
Download App:
  • android
  • ios