ಭಾರತದ ಮೊಬೈಲ್ ಬಳಕೆಯ ಸುದ್ದಿ ಹಾಗೂ ಮಾಹಿತಿ ಜಾಲತಾಣಗಳ ಪೈಕಿ ಏಷ್ಯಾನೆಟ್ ನ್ಯೂಸ್‌ ನೆಟ್‌ವರ್ಕ್ 30ರಲ್ಲೊಂದು ಸ್ಥಾನ ಪಡೆದುಕೊಂಡಿದೆ. ಡಿಸೆಂಬರ್ 2017ರಲ್ಲಿ ಕಾಮ್‌ಸ್ಕೋರ್ ಈ ಪಟ್ಟಿ ಬಿಡುಗಡೆ ಮಾಡಿದ್ದು, 116ನೇ ಸ್ಥಾನದಿಂದ 28ನೇ ಸ್ಥಾನಕ್ಕೇರಿದ ಈ ಸುದ್ದಿ ಸಂಸ್ಥೆ.

ಕಸ್ಟಡಿಯಲ್ಲಿ ಮೃತಪಟ್ಟ ಸಹೋದರನ ಸಾವಿನ ತನಿಖೆಗಾಗಿ ಬರೋಬ್ಬರಿ 767 ದಿನಗಳ ನಿರಂತರ ಹೋರಾಟ ನಡೆಸಿ, ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿಯಾಗಿ, ಶ್ರೀಶಾಂತ್ ನಗೆ ಬೀರಿದ್ದರು. ಈ ಕ್ಷಣವನ್ನು ಭಿತ್ತರಿಸಿದ ಏಷ್ಯಾನೆಟ್ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ವರದಿ ಮಾಡಿತ್ತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ಶಶಿಕಲಾಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ಬಗ್ಗೆ ಏಷ್ಯಾನೆಟ್ ನ್ಯೂಸೇಬಲ್ ವರದಿ ನೀಡಿ, ಅನೇಕರ ಹುಬ್ಬೇರುವಂತೆ ಮಾಡಿತ್ತು.

ಈ ಪೀಠಿಕೆ ಏಕೆ ?

ಭಾರತದ ಮೊಬೈಲ್ ಬಳಕೆಯ ಸುದ್ದಿ ಹಾಗೂ ಮಾಹಿತಿ ಜಾಲತಾಣಗಳ ಪೈಕಿ ಏಷ್ಯಾನೆಟ್ ನ್ಯೂಸ್‌ ನೆಟ್‌ವರ್ಕ್ 30ರಲ್ಲೊಂದು ಸ್ಥಾನ ಪಡೆದುಕೊಂಡಿದೆ. ಡಿಸೆಂಬರ್ 2017ರಲ್ಲಿ ಕಾಮ್‌ಸ್ಕೋರ್ ಈ ಪಟ್ಟಿ ಬಿಡುಗಡೆ ಮಾಡಿದ್ದು, 116ನೇ ಸ್ಥಾನದಿಂದ 28ನೇ ಸ್ಥಾನಕ್ಕೇರಿದ ಈ ಸುದ್ದಿ ಸಂಸ್ಥೆ.

ಇದರಲ್ಲೇನು ವಿಶೇಷ?

ಪ್ರಾದೇಶಿಕ ಭಾಷೆಯಲ್ಲಿ (ಹಿಂದಿ ಹೊರತುಪಡಿಸಿ) ಏಷ್ಯಾನೆಟ್ ಮೊದಲನೇ ಸ್ಥಾನದಲ್ಲಿದೆ. ಎಬಿಪಿ ಗ್ರೂಪ್, ಮನೋರಮಾ, ವಿಕಟನ್, ನ್ಯೂಸ್‌ಹರ್ಟ್, ಈ ದುನಿಯಾ.ಕಾಮ್, ಟೆಲಿಗ್ರಾಫ್, ದಿನ್‌ಮಲಾರ್, ಲೋಕಮತ್ ಮುಂತಾದ ದಿಗ್ಗಜ ಮಾಧ್ಯಮ ಸಂಸ್ಥೆಗಳನ್ನು ಹಿಂದಿಕ್ಕಿ ಏಷ್ಯಾನೆಟ್ ಈ ಸ್ಥಾನವನ್ನು ತಲುಪಿದೆ.

55 ಲಕ್ಷ ಫೇಸ್‌ಬುಕ್ ಫಾಲೋಯರ್ಸ್ ಮತ್ತು 11 ಲಕ್ಷ ಯೂಟ್ಯೂಬ್ ಸಬ್‌ಸ್ಕ್ರೈಬರ್ಸ್ ಅನ್ನು ಹೊಂದಿರುವ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಭಾರತದಲ್ಲಿಯೇ ತ್ವರಿತವಾಗಿ ಪ್ರಗತಿ ಸಾಧಿಸುತ್ತಿರುವ ಮಾಧ್ಯಮ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿದೆ. 

ಈ ಗುರಿ ತಲುಪಿದ್ದು ಹೇಗೆ?

ಕೇರಳ ಸಾರಿಗೆ ಸಚಿವರಾಗಿದ್ದ ಥಾಮಸ್ ಚಾಂಡಿ ಅಲಪ್ಪುಜಾ ಜಿಲ್ಲೆಯಲ್ಲಿ ರೆಸಾರ್ಟ್ ನಿರ್ಮಿಸಲು ಭೂ ಕಬಳಿಸಿದ್ದನ್ನು ಈ ಸಂಸ್ಥೆಯ ಮಲಯಾಳಂ ಸೈಟ್ ಏಷ್ಯಾನೆಟ್ ನ್ಯೂಸ್ ವರದಿ ಮಾಡಿತ್ತು. ಇದರ ಪರಣಾಮದಿಂದಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಕರ್ನಾಟಕ ಚುನಾವಣೆ 2018ಕ್ಕೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮೊದಲಿಗೆ ನಡೆಸಿದ ಕೀರ್ತಿ ಕನ್ನಡದ ಸುವರ್ಣ ನ್ಯೂಸ್‌ಗೆ ಸಲ್ಲುತ್ತದೆ.

ಇಂಗ್ಲೆಷ್ ಸೈಟ್ ಏಷ್ಯಾನೆಟ್ ನ್ಯೂಸೇಬಲ್ ಐಪಿಎಸ್ ಅಧಿಕಾರಿ ರೂಪಾ ಅವರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಉತ್ತಮ ವರದಿ ಭಿತ್ತರಿಸಿತ್ತು. ಅಷ್ಟೇ ಅಲ್ಲ ಬೆಂಗಳೂರು ಕಾರ್ಪೋರೇಟರ್‌ಗಳಿಗೆ ನಾಡಗೀತೆಯೂ ಗೊತ್ತಿಲ್ಲದ ವಿಷಯವನ್ನು ವರದಿ ಮಾಡಿದ್ದು ವಿಶೇಷವಾಗಿತ್ತು. ಎಲ್ಲ ಮಹಾನಗರ ಪಾಲಿಕೆ ಸದಸ್ಯರು ನಾಡಗೀತೆ ಹಾಡುವಂತೆ ಮಾಡಿದ್ದು ಈ ವರದಿಯ ಫಲಶ್ರುತಿ.

2016ರ ಅಕ್ಟೋಬರ್‌ಗೆ ಜನ್ಮತಾಳಿದ ಏಷ್ಯಾನೆಟ್ ತೆಲುಗು ಸಹ ತನ್ನದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದು, ಹೊಸ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಸುದ್ದಿಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ಭಿತ್ತರಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಏಷ್ಯಾನೆಟ್ ನ್ಯೂಸ್ ತಮಿಳು ಸುಮಾರು 5.7 ಲಕ್ಷ ಫೇಸ್‌ಬುಕ್ ಫಾಲೋಯರ್ಸ್‌ ಹೊಂದಿದ್ದು, ತಮಿಳು ಡಿಜಿಟಲ್ ಮಾಧ್ಯಮದಲ್ಲಿಯೇ ತನ್ನದೇ ಛಾಪು ಮೂಡಿಸಿದೆ.

ಪ್ರಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಸಹ ಮಾಲೀಕತ್ವವನ್ನು ಏಷ್ಯಾನೆಟ್ ನ್ಯೂಸ್ ಹೊಂದಿದ್ದು, ಇದರಲ್ಲಿ ಭಾರತದ ಸೂಪರ್ ಎಕ್ಸ್‌ಕ್ಲೂಸಿವ್ ಸುದ್ದಿಗಳು ಪ್ರಸಾರವಾಗುತ್ತವೆ.

ತ್ವರಿತ, ವಿಸ್ಕೃತ, ವಿಶ್ವಾಸಾರ್ಹ ವರದಿಗಳನ್ನು ಭಿತ್ತರಿಸುತ್ತಿರುವುದರಿಂದಲೇ ಏಷ್ಯಾನೆಟ್‌ ನ್ಯೂಸ್ ರಾಷ್ಟ್ರ ಮಾದ್ಯಮ ಲೋಕದಲ್ಲಿಯೇ ತನ್ನದೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.