ಚಿಕ್ಕಮಗಳೂರು (ಮಾ.24): ಎಎಸ್’ಐ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ.  ಎಎಸ್’ಐ ಕುಮಾರನಾಯ್ಕ ವಿರುದ್ಧ  ಅತ್ಯಾಚಾರ ಪ್ರಕರಣ ದಾಖಲಾಗಿದೆ. 

ಎನ್.ಆರ್.ಪುರ ಪೊಲೀಸ್ ಠಾಣೆಯ ಎಎಸ್’ಐ ನಿನ್ನೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ್ದರು. ನೊಂದ  ಮಹಿಳೆ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಚುನಾವಣೆ ಕರ್ತವ್ಯದ ಗಸ್ತು ಬಂದಿರುವ ಬಗ್ಗೆ ಸಹಿ ಪಡೆಯಲು ಹೋಗಿದ್ದ ಎಎಸೈ ಸಹಿ ಪಡೆಯುವ ವೇಳೆಯಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.   ಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡ ಎನ್.ಆರ್.ಪುರ ಪೊಲೀಸರು ಪೊಲೀಸ್ ಕುಮಾರನಾಯ್ಕ ಬಂಧಿಸಿದ್ದಾರೆ. ಕುಮಾರ್ ನಾಯ್ಕ್’ರನ್ನು ಅಮಾನತುಗೊಳಿಸಲಾಗಿದೆ.